Ad imageAd image

‘ಮಹಾಯುತಿ’ ಕೂಟದಲ್ಲಿ ಅಧಿಕಾರ ಹಂಚಿಕೆ ಮಾತುಕತೆ ಆರಂಭ

Bharath Vaibhav
‘ಮಹಾಯುತಿ’ ಕೂಟದಲ್ಲಿ ಅಧಿಕಾರ ಹಂಚಿಕೆ ಮಾತುಕತೆ ಆರಂಭ
WhatsApp Group Join Now
Telegram Group Join Now

——–ಬಾAದ್ರಾ ಪಂಚತಾರಾ ಹೊಟೇಲ್‌ನಲ್ಲಿ ಶಿಂದೆ ‘ಸೇನಾ’ ಟೀಮ್ ಥಿಕಾಣಿ

ಮುಂಬೈ/ ಪುಣೆ: ಮಹಾರಾಷ್ಟç ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರ‍್ಜರಿ ಜಯ ಸಾಧಿಸಿರುವ ಬಿಜೆಪಿ ನೇತೃತ್ವದ ‘ಮಹಾಯುತಿ’ ನಡುವೆ ಈಗ ಅಧಿಕಾರ ಹಂಚಿಕೆ ಸೂತ್ರದ ಮಾತುಕತೆ ಸಾಗಿವೆ.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಮೈತ್ರಿಕೂಟವಾವ ‘ಮಹಾಹುತಿ’ ಸ್ಪಷ್ಟ ಬಹುಮತ ಗಳಿಸಿದೆ. ಆದರೆ ಈಗ ಅಧಿಕಾರ ಹಂಚಿಕೆ ಮಾತುಕತೆ ಸಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಏತನ್ಮಧ್ಯೆ ಏಕನಾಥ ಶಿಂಧೆ ಶಿವಸೇನಾ ಬಳಗದ ಎಲ್ಲ ೨೯ ನೂತನ ಸದಸಯರನ್ನು ಬಾಂದ್ರಾದಲ್ಲಿರುವ ಪಂಚತಾರಾ ಹೊಟೇಲ್ ನಲ್ಲಿ ಇರಿಸಲಾಗಿದೆ. ಬಿಜೆಪಿ ಆಮೀಷಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಶಿಂಧೆ ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಮಹಾರಾಷ್ಟç ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿಕೆಯೊಂದನ್ನು ನೀಡಿ ಮೈತ್ರಿಕೂಟದ ಯಾವುದೇ ಸದಸ್ಯರಿಗೆ ಆಮೀಷ ಒಡ್ಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಏನೇ ಆದರೂ ಅಧಿಕಾರ ಹಂಚಿಕೆಗೆ ಸಂಬAಧಿಸಿದAತೆ ಮೈತ್ರಿಕೂಟ ಪಕ್ಷಗಳಲ್ಲಿ ರೆಸರ‍್ಟ್ ರಾಜಕೀಯ ನಡೆದಿರುವುದಂತೂ ಸ್ಪಷ್ಟ. ಆದರೆ ಈ ನಡುವೆ ಮೈತ್ರಿಕೂಟಗಳ ಪಕ್ಷಗಳಲ್ಲಿನ ಮಾತುಕತೆ ಸಮಯ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!