ಕಲಬುರಗಿ: ಇದು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೈಗೊಂಡಿರುವ ತುರ್ತು ನಿರ್ಧಾರವಾಗಿದೆ. ಇವರು ಎಡಿಜಿಪಿ ಹುದ್ದೆಯ ಶ್ರೇಣಿಯ ಅಧಿಕಾರಿಯಾಗಿರುವುದರಿಂದ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಘಟನೆಯ ಕುರಿತು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದರೆ ಸರ್ಕಾರ, ಯಾವುದೇ ತನಿಖೆ ಇಲ್ಲದೆ, ಶಿಸ್ತಿನ ಸೂಚನೆ ಇಲ್ಲದೆ, ರಾಜಕೀಯ ಹಿತರಕ್ಷಣೆಗೆ ಮಾತ್ರ ತಲೆಕೊಟ್ಟು, ತಕ್ಷಣ ಅವರನ್ನು ಅಮಾನತುಗೊಳಿಸಿರುವುದು ಗಂಭೀರ ವಿಷಾದಕರ ಸಂಗತಿ.
ಬಿ. ದಯಾನಂದ ಅವರು ನಿಷ್ಠಾವಂತತೆ, ಶಿಸ್ತಿನ ಸೇವೆ, ಮತ್ತು ಜನತೆಯ ವಿಶ್ವಾಸಕ್ಕೆ ಪಾತ್ರರಾದ ಅಧಿಕಾರಿ. ಅವರನ್ನು ನಿಷ್ಕ್ರಿಯಗೊಳಿಸಿ ಸರ್ಕಾರ ತನ್ನ “ಹರಕೆ” ನೆರವೇರಿಸಿಕೊಂಡಂತಾಗಿದೆ. ಇಂತಹ ನಾಚಿಕೆಗೆಡುಕಟ್ಟದ ವರ್ತನೆ ಅಧಿಕಾರಿಗಳ ವಿರುದ್ಧ ದರ್ಪ ತೋರುವ ಉದಾಹರಣೆಯಾಗಿದ್ದು, ಈ ದೇಶದಲ್ಲಿ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೂಲಮೂಲ್ಯಗಳ ವಿರುದ್ಧ ನಡೆಯುವ ಹಿಂಸೆಗಳಂತಿದೆ.
ಇದಕ್ಕಿಂತಲೂ ವಿಷಾದಕರ ಸಂಗತಿ ಏನೆಂದರೆ, ಪದೇಪದೇ ವಾಲ್ಮೀಕಿ ಸಮುದಾಯದ ಅಧಿಕಾರಿಗಳ ವಿರುದ್ಧ ತೋರಲಾಗುತ್ತಿರುವ ದಬ್ಬಾಳಿಕೆ. ಇಂತಹ ಜಾತಿ ಆಧಾರಿತ ವಿಭಜನೆ ಮತ್ತು ಅನ್ಯಾಯ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಸರ್ಕಾರವನ್ನು ಜನತೆ ತೀವ್ರವಾಗಿ ಪ್ರಶ್ನಿಸುವ ಕಾಲ ಹತ್ತಿರದಲ್ಲಿದೆ.
ತಕ್ಷಣ ಈ ಅಮಾನತು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಜವಾಬ್ದಾರಿ ಮತ್ತು ನೈತಿಕತೆಗನುಗುಣವಾಗಿರುತ್ತದೆ ಎಂದು ಯಲ್ಲಾಲಿಂಗ ದೊರೆ ಬಿರಾಳ
ನ್ಯಾಯವಾದಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ, ಕಲಬುರ್ಗಿ ರವರು ಆಕ್ರೋಶ ವ್ಯಕ್ತಪಡಿಸಿದರು
ವರದಿ: ವೆಂಕಟಪ್ಪ ಕೆ ಸುಗ್ಗಾಲ್




