ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅನೇಕ ಕಾರಣಕ್ಕೆ ದೇಶದಲ್ಲಿ ಅಪಖ್ಯಾತಿ ಪಡೆಯುತ್ತಿದ್ದು, ಇದೀಗ ಮಾನವ ಹಕ್ಕುಗಳ ಉಲ್ಲಂಘನೆ ಕೇಸ್ ವಿಚಾರದಲ್ಲಿಯೂ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ಬೆಂಗಳೂರು ಮಾನವ ಹಕ್ಕುಗಳ ಉಲ್ಲಂಘನೆಗಳ ಹಾಟ್ ಸ್ಪಾಟ್ ಆಗಿ ಹೊರಹೊಮ್ಮಿದ್ದು, ಮಾನವ ಹಕ್ಕುಗಳ ಆಯೋಗ ಬಿಡುಗಡೆ ಮಾಡಿರೋ ಅಂಕಿ ಅಂಶಗಳು ಬೆಚ್ಚಿಬೀಳಿಸುವಂತಿದೆ.
ಬೆಂಗಳೂರು ನಗರ ಪ್ರದೇಶದಲ್ಲಿ 2024 ರಲ್ಲಿ ಒಟ್ಟು 3537 ಮಾನವ ಹಕ್ಕುಗಳ ಉಲ್ಲಂಘನೆ ಕೇಸ್ ದಾಖಲಾಗಿದ್ದು , ಇದು 2022 ಹಾಗೂ 2023 ಕ್ಕಿಂತಲೂ ಹೆಚ್ಚಾಗಿದೆ. ದೇಶದ ಮಟ್ಟದಲ್ಲಿ ಇದು ಬೆಂಗಳೂರಿಗೆ ಕೆಟ್ಟ ಹೆಸರು ತರುವಂತಹ ವಿಚಾರವಾಗಿದ್ದು , ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.