Ad imageAd image

ಡೇಟಿಂಗ್ ಆಯಪ್ ಬಳಸುವವರ ಸಂಖ್ಯೆಯಲ್ಲಿ ಬೆಂಗಳೂರು ನಂ. 1

Bharath Vaibhav
ಡೇಟಿಂಗ್ ಆಯಪ್ ಬಳಸುವವರ ಸಂಖ್ಯೆಯಲ್ಲಿ ಬೆಂಗಳೂರು ನಂ. 1
WhatsApp Group Join Now
Telegram Group Join Now

ಬೆಂಗಳೂರು : ವಿವಾಹೇತರ ಸಂಬಂಧಗಳಿಗಾಗಿ ಡೇಟಿಂಗ್ ಆಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೇವಲ ಭಾರತವೊಂದರಲ್ಲೇ 3 ಮಿಲಿಯನ್ ದಾಟಿದ್ದು, ಬೆಂಗಳೂರಿನಲ್ಲೇ ಅತಿ ಹೆಚ್ಚು ಜನ ಬಳಕೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಗ್ಲೀಡನ್ ಎಂಬ ವಿವಾಹೇತರ ಸಂಬಂಧಿ ಆಯಪ್ ವೊಂದು ಇತ್ತೀಚೆಗೆ ಸರ್ವೇಯೊಂದನ್ನು ನಡೆಸಿದ್ದು, ಭಾರತವೊಂದರಲ್ಲೇ ಬರೋಬ್ಬರಿ 3 ಮಿಲಿಯನ್ ಜನ ಈ ಆಯಪ್ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.ಅದರಲ್ಲೂ ಬೆಂಗಳೂರಿನಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ.

ವರದಿಯ ಪ್ರಕಾರ, 2024ಕ್ಕೆ ಹೋಲಿಸಿದರೆ, ಈ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆಯಲ್ಲಿ ಶೇ. 270 ರಷ್ಟು ಏರಿಕೆ ಕಂಡು ಬಂದಿದೆ ಎಂದು ಸ್ವತಃ ಗ್ಲೀಡನ್ ಹೇಳಿಕೊಂಡಿದ್ದು,ಹೊಸ ಬಳಕೆದಾರರ ಪೈಕಿ ಶೇ. 128 ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಒಟ್ಟು ಬಳಕೆದಾರರ ಪೈಕಿ ಶೇ. 40 ರಷ್ಟು ಮಂದಿ 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರಿದ್ದಾರೆ ಎಂದು ತಿಳಿಸಿದೆ.

ದೇಶದಲ್ಲಿ ಆಯಪ್ ಬಳಕೆದಾರರನ್ನು ನೋಡುವುದಾದರೆ, ಬೆಂಗಳೂರು ಶೇ. 20 ರಷ್ಟು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮುಂಬೈ ಶೇ.19, ಕೋಲ್ಕತ್ತಾ ಶೇ.18, ದೆಹಲಿ ಶೇ.15 ಜನ ಈ ಆಯಪ್ ಅನ್ನು ಬಳಸುತ್ತಿದ್ದಾರೆ ಎಂದು ವರದಿ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!