Ad imageAd image

ಕರ್ತವ್ಯದಲ್ಲಿ ಮೃತ ಪಟ್ಟ ಪತ್ರಕರ್ತರಿಗೆ ಸರ್ಕಾರ 10 ಲಕ್ಷ ಪರಿಹಾರ  ನೀಡಲಿ:ಬಂಗ್ಲೆ ಮಲ್ಲಿಕಾರ್ಜುನ.

Bharath Vaibhav
ಕರ್ತವ್ಯದಲ್ಲಿ ಮೃತ ಪಟ್ಟ ಪತ್ರಕರ್ತರಿಗೆ ಸರ್ಕಾರ 10 ಲಕ್ಷ ಪರಿಹಾರ  ನೀಡಲಿ:ಬಂಗ್ಲೆ ಮಲ್ಲಿಕಾರ್ಜುನ.
WhatsApp Group Join Now
Telegram Group Join Now

ಬಳ್ಳಾರಿ :ಪತ್ರಕರ್ತರಾಗಿ ಸೇವೆಸಲ್ಲಿಸುವಾಗ ಅನಾರೋಗ್ಯ, ಅಪಘಾತ ಇನ್ನಿತರ ಕಾರಣಗಳಿಂದ ಮೃತ ಪಟ್ಟವರಿಗೆ ಕನಿಷ್ಠ 10 ಲಕ್ಷ ಸರ್ಕಾರ ಪರಿಹಾರ ನೀಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಒತ್ತಾಯ ಮಾಡಿದರು.

ನಗರದ ಗಾಂಧಿನಗರ ಪೊಲೀಸ್ ಠಾಣೆಯ ಎದುಗಡೆ ಇರುವ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಬೆಳಿಗ್ಗೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಉಪಸಂಪಾದಕರರಾದ ವಿರೇಶ್ ಕಟ್ಟೆಮ್ಯಾಗಳ ಅವರು ಕೆಲದಿನಗಳ‌ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು, ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ವಿರೇಶ್ ಕಟ್ಟೆಮ್ಯಾಗಳ ಅವರು ಹಳ್ಳಿ ಮಟ್ಟದಿಂದ ಜಿಲ್ಲೆಮಟ್ಟದ ವರದಿಗಾರರಾಗಿ ಬೆಳೆದ ವ್ಯಕ್ತಿ, ವಿಜಯ ಕರ್ನಾಟಕದ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುವಾಗ ಮೃತ ಪಟ್ಟಿದ್ದಾರೆ ಅವರಿಗೆ ಸರ್ಕಾರದಿಂದ ಯಾವುದೆ ಸೌಲಭ್ಯ ಇಲ್ಲ, ವಿಮಾ ಸೌಲಭ್ಯ ಇಲ್ಲ ಇದರಿಂದ ಅವರ ಕುಟುಂಬಗಳ ಪರಿಸ್ಥಿತಿ ಕಷ್ಟಕರವಾಗುತ್ತದೆ ಹಾಗಾಗಿ ಸರ್ಕಾರ ಮೃತ ಪಟ್ಟ ಪತ್ರಕರ್ತರಿಗೆ ಕನಿಷ್ಠ 10 ಲಕ್ಷ ನೀಡಬೇಕು, ವಿಮಾ ಸೌಲಭ್ಯ, ಕಾರ್ಮಿಕ ಇಲಾಕೇಯ ಸೌಲಭ್ಯ ದೊರೆಯಬೇಕು.

ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.ಅನೇಕ ದಿನ ಪತ್ರಿಕೆಯ ಮಾಲೀಕರು ವಂಚನೆ ಮಾಡುತ್ತಿದ್ದಾರೆ.ಅನೇಕರಿಗೆ ವರದಿಗಾರಿಗೆ ಸಂಬಳ ವಿಲ್ಲ. ಸರ್ಕಾರದ ಸೌಲಭ್ಯಗಳು ಇಲ್ಲ ಎಂದರು.ಸರ್ಕಾರ ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್ ಉಚಿತ ಮಾಡಿದೆ ಆದರೆ ಇದುವರೆಗೂ ಮಾನದಂಡಗಳು ಜಾರಿಯಾಗಿಲ್ಲ.

ನಂತರ ಐದು ನಿಮಿಷಗಳ ಕಾಲ ಮೌನ ಆಚರಣೆ ಮಾಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಗಿರಿಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಗೌಡ, ಹಿರಿಯ ವರದಿಗಾರರಾದ ಸಿಂಗಾಪುರ ನಾಗರಾಜ್, ಮಲ್ಲಪ್ಪ, ಪಲ್ಲವಿ,ಶಶಿಕಾಂತ, ಕಪ್ಪಗಲ್ಲು ವೆಂಕಟೇಶ್ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!