ಸೇಡಂ: ತಾಲೂಕಿನ ಪಾಖಲಾ ಗ್ರಾಮದಲ್ಲಿ ನವರಾತ್ರಿ ಹಾಗೂ ದಸರಾ ದೀಪಾವಳಿ ಹಬ್ಬದ ಶುಭಾಶಯಗಳು ತಿಳಿಸುತ್ತಾ ಗ್ರಾಮದ ಸಾಯಿಲು ಮೈಲ್ವರ್ ಅವರು ಮಹಾತ್ಮ ಗಾಂಧಿ ವಿಗ್ರಹ ಮತ್ತು ಅಂಬಿಗರ ಚೌಡಯ್ಯ ಅವರ ವಿಗ್ರಹ ಮದ್ಯದಲ್ಲಿ ಸೋಲಾರ್ ಲೈಟ್ ಕಂಬಕ್ಕೆ ಬ್ಯಾನರ್ ಹಾಕಿದರು.
ಆದರೆ ಕೆಲವು ಪುಂಡರು ಅದನ್ನು ಹರಿದು ಹಾಕಿದ್ದಾರೆ.ಕಾರಣ ನಾವು ಮಾದಿಗ ಜನಾಂಗವಾಗಿದ್ದು ಇಲ್ಲಿನ ಗ್ರಾಮದ ಮೇಲ್ಜಾತಿಯವರಿಗೆ ಆಗಿಬರಲ್ಲ ಅದೇ ಕಾರಣದಿಂದಾಗಿ ನಾನು ಹಾಕಿರುವ ಬ್ಯಾನರ್ ಅನ್ನು ಹರಿದು ಹಾಕಿದ್ದಾರೆ ಎಂದು ಸಾಯಿಲು ಮೈಲ್ವರ್ ಆರೋಪಿಸಿದ್ದಾರೆ.

ತನಿಖೆ ನಡೆಸುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ತಾನು ಹಾಕಿರುವ ಬ್ಯಾನರ್ ಹರಿದು ಹಾಕಿದ್ದು ಯಾರು ಎಂಬುದು ತಿಳಿಯುವ ತನಕ ನಾನು ಬಿಡುವುದಿಲ್ಲ ಎಂದು ಸಾಯಿಲು ಪಟ್ಟು ಹಿಡಿದಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




