Ad imageAd image

ಶೌಚಾಲಯಕ್ಕೆ ಹೋಗಿಬಂದ ವಿದ್ಯಾರ್ಥಿಗೆ ಮನಬಂದಂತೆ ಹೊಡೆದ ಶಿಕ್ಷಕಿ ಬಾನುಮತಿ

Bharath Vaibhav
ಶೌಚಾಲಯಕ್ಕೆ  ಹೋಗಿಬಂದ ವಿದ್ಯಾರ್ಥಿಗೆ ಮನಬಂದಂತೆ ಹೊಡೆದ ಶಿಕ್ಷಕಿ ಬಾನುಮತಿ
WhatsApp Group Join Now
Telegram Group Join Now

 

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಪ್ರತಿಷ್ಠಿತ ಎಸ್ ಡಿ ವಿ ಎಸ್. ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕಿ ಒಬ್ಬಳುಮನಬಂದಂತೆ ಹೊಡೆದಿರುವ ಘಟನೆ ನೆಡೆದಿದೆ

ಯಳಂದೂರು ಪೊಲೀಸ್ ಠಾಣೆಯಲ್ಲಿ ಮಕ್ಕಳು ಹಕ್ಕುಗಳ ಉಲ್ಲಂಘನೆ ಕಾಯ್ದೆಯಡಿಯಲ್ಲಿ ಬಾನುಮತಿ ಮೇಲೆ ಪ್ರಕರಣ ದಾಖಲು ಪರೀಕ್ಷೆ ನೆಡೆಯುವ ಸಮಯದಲ್ಲಿ 5ನೇ ತರಗತಿ ವಿದ್ಯಾರ್ಥಿ ಗುರುಪ್ರಸಾದ್ ಶೌಚಾಲಯಕೆ ಹೋಗಿಬರಲು ಅನುಮತಿಕೇಳಿದನೇ ಆದರೆ ಶಿಕ್ಷಕಿ ಬಾನುಮತಿ ನಿರಾಕರಿಸಿದರೆ ಆದರೆ ವಿದ್ಯಾರ್ಥಿ ಅನುಮತಿ ಪಡೆಯದೆ ಶೌಚಾಲಯಕೆ ಹೋಗಿಬಂದ ಎಂಬ ಕಾರಣಕೆ ವಿದ್ಯಾರ್ಥಿಗೆ, ಕೈ ಗೆ ಸಿಕ್ಕ ಜಾಮಿಟ್ರಿ ಬಾಕ್ಸ್ ಹಾಗೂ ಕಡ್ಡಿ ಯಿಂದ ಮನಬಂದಂತೆ ಹೊಡೆದಿದ್ದಾರೆ.

ವಿದ್ಯಾರ್ಥಿ ಸ್ಥಳದಲ್ಲೇ ಪ್ರಜ್ಞೆತಪ್ಪಿ ಬಿದ್ದಿದಾನೆ ನಂತರ ಯಳಂದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಿದ್ಯಾರ್ಥಿಯನ್ನೂ ಚಾಮಲಾಪುರ ಗ್ರಾಮಕೆ ಕಳುಹಿಸಿದರೆ ವಿಷಯ ತಿಳಿದ ಪೋಷಕರು ನೇರವಾಗಿ ಎಸ್ ಡಿ ವಿ ಎಸ್. ಶಾಲೆಯ ಆಡಳಿತ ಮಂಡಳ್ಳಿಯನ್ನು ವಿಚಾರಿಸಿದರೆ ಆದರೆ ಆಡಳಿತ ಮಂಡಳಿಯವರು ಉಡಾಪೆಯ ಉತ್ತರವನ್ನು ನೀಡಿದರೆ ಎಂದು ಬೇಸರಗೊಂಡ ಪೋಷಕರು ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದಾರೆ.

ಶಾಲೆಯ ಆವರಣದಲ್ಲಿ ಜಮಾಹಿಸಿದ ಪೋಷಕರು ಶಿಕ್ಷಕಿ ಕರಿಸಿ ಅವಳಿಗೆ ಬುದ್ದಿಕಲಿಸುತೇವೆ ಈ ಶಾಲೆಯಲ್ಲಿ ಅವಳದು ಇದು ಐದನೇ ಕಂಪ್ಲೇಟ್ ಎಂದು ಮಂಡಳಿಯ ಮೇಲೆ ಆಕ್ರೋಶ ವ್ಯಕ್ತಿ ಪಡಿಸಿದರು. ಎಸ್ ಡಿ ವಿ ಎಸ್. ಖಾಸಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕಿಯಾದು ಮೇಲ್ನೋಟಕ್ಕೆ ತಪ್ಪು ಎಂದು ತಿಳಿದು ಬಂದಿದೆ.

ಶಿಕ್ಷಕಿಯನ್ನು ಕೊಡಲೇ ವಜಾಗೊಳಿಸಬೇಕು ಇಲ್ಲವಾದರೆ ಶಾಲಾ ಆಡಳಿತ ಮಂಡಳಿಯ ಮೇಲೆ ಕ್ರಮ ಜಾರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟ ಚಾಮರಾಜನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ  ಎಸ್.‌ ಚಂದ್ರಪಾಟೀಲ್‌.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!