ತುಮಕೂರು: ಮನೆ ಮಾಲೀಕನ ಪತ್ನಿಯನ್ನೇ ಪ್ರೀತಿಸಿ, ಮದುವೆಯಾದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿ ಎಸೆದಿರುವ ಘಟನೆ ತುಮಕೂರಿನ ಜಯಪುರದಲ್ಲಿ ನಡೆದಿದೆ.
ಮೃತನನ್ನು ದಿಲೀಪ್ ಎಂದು ಗುರುತಿಸಲಾಗಿದ್ದು, ಈತ ಸೋಲೂರು ಮೂಲದ ನಿವಾಸಿ. ಈತ ಪತ್ನಿಯೊಂದಿಗೆ ಹೆಂಡತಿಯೊಂದಿಗೆ ಸ್ನ್ಯಾಕ್ಸ್ ತಿನ್ನಲು ಬಂದಿದ್ದ ವೇಳೆ ಈ ಕೃತ್ಯ ಎಸೆಯಲಾಗಿದೆ.
ದಾಬಸ್ ಪೇಟೆಯಲ್ಲಿ ಕಾರ್ಗೋ ನಡೆಸುತ್ತಿದ್ದ ದಿಲೀಪ್, ಸೋಲೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಈ ವೇಳೆ ಮನೆ ಮಾಲೀಕನ ಪತ್ನಿ ಅಮೃತಾಳ ಪರಿಚಯವಾಗಿತ್ತು. ಈ ಗೆಳೆತನ ಪ್ರೀತಿಗೆ ತಿರುಗಿ 5 ವರ್ಷದ ಹಿಂದೆ ಅಮೃತಾಳನ್ನು ದಿಲೀಪ್ ವರಿಸಿದ್ದ. ಇದು ಕುಟುಂಬಸ್ಥರ ಸಿಟ್ಟಿಗೆ ಕಾರಣವಾಯಿತು.
ಇತ್ತ ಎಂದಿನಂತೆ ಭಾನುವಾರ ದಿಲೀಪ್ ಹಾಗೂ ಅಮೃತ ಸ್ನ್ಯಾಕ್ಸ್ ತಿನ್ನಲು ನೆಲಮಂಗಲಗೆ ಬಂದಿದ್ದರು. ಈ ವೇಳೆ ಏಕಾಏಕಿ ಬಂದ ಐದಾರು ಮಂದಿ ದುಷ್ಕರ್ಮಿಗಳು ದಿಲೀಪ್ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ, ಅಪಹರಿಸಿದ್ರು.
ನಂತರ ಕೊಲೆ ಮಾಡಿ ಮೃತದೇಹವನ್ನು ತುಮಕೂರಿನ ಜಯಪುರ ಬಯಲು ಪ್ರದೇಶದಲ್ಲಿ ಬಿಸಾಕಿ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮೃತದೇಹವನ್ನು ಜಿಲ್ಲಾ ಶವಗಾರಕ್ಕೆ ರವಾನಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.