Ad imageAd image

ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಬರ್ಬರ ಕೊಲೆ 

Bharath Vaibhav
ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಬರ್ಬರ ಕೊಲೆ 
WhatsApp Group Join Now
Telegram Group Join Now

ಕೊಪ್ಪಳ : ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕನ ಕೊಲೆ ನಡೆದ ಘಟನೆ ಕೊಪ್ಪಳ ನಗರದ ವಾರ್ಡ್ 3 ರ ಮಸೀದಿ ಮುಂಭಾಗದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನ ಗವಿಸಿದ್ದಪ್ಪ ನಾಯಕ್ ಎಂದು ಗುರುತಿಸಲಾಗಿದೆ. ಗವಿಸಿದ್ದಪ್ಪನನ್ನು ಕೊಲೆಗೈದ ದುಷ್ಟ ಸಾದಿಕ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಗವಿಸಿದ್ದಪ್ಪ ಕಳೆದ 2 ವರ್ಷದಿಂದ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದನು. ಇಬ್ಬರು ಇತ್ತೀಚೆಗೆ ಮನೆ ಬಿಟ್ಟು ಸಹ ಓಡಿ ಹೋಗಿದ್ದರು.

ನಂತರ ಪಂಚಾಯಿತಿ ಕೂಡ ಮಾಡಲಾಗಿತ್ತು. ಬಳಿಕವೂ ಇಬ್ಬರ ನಡುವೆ ಪ್ರೀತಿ ಮುಂದುವರೆದಿದ್ದು, ಈ ದ್ವೇಷಕ್ಕೆ ಗವಿಸಿದ್ದಪ್ಪನ್ನು ಸಾದಿಕ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!