ಬೆಳಗಾವಿ : ತಾಯಿ ಮತ್ತು ಮಗ ಇಬ್ಬರನ್ನೂ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಅಥಣಿ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದವರನ್ನು ಚಂದ್ರವ್ವ (62) ವಿಠ್ಠಲ್ ಅಪ್ಪರಾಯ (42) ಎಂದು ಗುರುತಿಸಲಾಗಿದೆ. ಕೊಲೆಗಡುಕರು ಅಮ್ಮ-ಮಗನನ್ನು ಒಟ್ಟಿಗೆ ಕೊಲೆ ಮಾಡಿ ಸಮೀಪದ ಕಬ್ಬಿನ ಗದ್ದೆಯಲ್ಲಿ ಇಬ್ಬರ ಶವವನ್ನು ಎಸೆದು ಪರಾರಿಯಾಗಿದ್ದಾರೆ.
ಹತ್ಯೆಗೆ ನಿಖರ ನಿಖರ ಕಾರಣ ಸದ್ಯ ತಿಳಿದುಬಂದಿಲ್ಲ. ಭೀಕರ ಕೊಲೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.