ಚಂಡೀಗಡ : 120 ಕೋಟಿ ರೂಪಾಯಿ ರಸ್ತೆ ಕಾಮಗಾರಿ ಅಕ್ರಮವನ್ನ ಬಯಲಿಗೆಳೆದಿದ್ದ ಪತ್ರಕರ್ತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುಕೇಶ್ ಚಂದ್ರಾಕರ್ ಎಂಬಾತನ ಶವ ಪತ್ತೆಯಾಗಿದ್ದು , ಮಾಫಿಯಾಗೆ ಜರ್ನಲಿಸ್ಟ್ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಚಂಡೀಘಡ ಬಿಜಾಪುರ ಜಿಲ್ಲೆಯ ಬಾಸ್ಟರ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪತ್ರಕರ್ತ ಮುಕೇಶ್ ಚಂದ್ರಾಕರ್ ಸ್ಥಳೀಯ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಕಂಟ್ರಾಕ್ಟರ್ ಸುರೇಶ್ ಚಂದ್ರಾಕರ್ ಎಂಬುವರ ಮೇಲೆ ವರದಿ ಮಾಡಿ ರಸ್ತೆ ಕಾಮಗಾರಿಯಲ್ಲಿ ನಡೆದಿರುವ 120 ಕೋಟಿ ಅಕ್ರಮವನ್ನ ಸಾಕ್ಷಿ ಸಮೇತ ಜನತೆಯ ಮುಂದೆ ಬಿಚ್ಚಿಟ್ಟಿದ್ದರು.
ಜನವರಿ 1 ರಿಂದಲೂ ಮುಕೇಶ್ ಚಂದ್ರಾಕರ್ ನಾಪತ್ತೆಯಾದ ಹಿನ್ನೆಲೆ ಯುಕೇಶ್ ಚಂದ್ರಾಕರ್ ಕಂಪ್ಲೇಂಟ್ ನೀಡಿದ್ದರು. ಮುಕೇಶ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು .
ಪ್ರಕರಣ ಸಂಬಂಧ ಪೊಲೀಸರು ಮೊಬೈಲ್ ಲೋಕೇಶನ್ ಆಧರಿಸಿ ಮುಕೇಶ್ ಶಕೆ ಇರೋ ಜಾಗ ಪತ್ತೆ ಮಾಡಿದ್ದಾರೆ. ಕಂಟ್ರಾಕ್ಟರ್ ಸುರೇಶ್ ಚಂದ್ರಾಕರ್ ತಮ್ಮನನ್ನ ವಶಕ್ಕೆ ಪಡೆಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.