Ad imageAd image

ಮದುವೆಯ ಸತ್ಯ ಬಯಲು ಮಾಡಿದ ಪ್ರೇಯಸಿಯ ಬರ್ಬರ ಹತ್ಯೆಗೈದ ಪ್ರಿಯಕರ

Bharath Vaibhav
ಮದುವೆಯ ಸತ್ಯ ಬಯಲು ಮಾಡಿದ ಪ್ರೇಯಸಿಯ ಬರ್ಬರ ಹತ್ಯೆಗೈದ ಪ್ರಿಯಕರ
WhatsApp Group Join Now
Telegram Group Join Now

ಬೆಂಗಳೂರು : ವರ್ತೂರಿನಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಆಕೆಯ ಪ್ರಿಯಕರನೇ ವೈಯರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಮದುವೆಯ ಸತ್ಯ ಬಯಲು ಮಾಡಿದ ಯುವತಿಯನ್ನು ಆಕೆಯ ಲಿವ್-ಇನ್ ಪ್ರಿಯಕರ ವೈಯರ್‌ನಿಂದ ಕತ್ತು ಬಿಗಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೊಡಗು ಮೂಲದ ರಂಜಿತಾ (23) ಕೊಲೆಯಾದ ದುರ್ದೈವಿ. ಆರೋಪಿ ಅಯ್ಯಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ಕಾರಣ: ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಈ ವಿಷಯವನ್ನು ಆತ ಮುಚ್ಚಿಟ್ಟು ರಂಜಿತಾಳೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದನು. ಇತ್ತೀಚೆಗೆ ಅಯ್ಯಪ್ಪನಿಗೆ ಮದುವೆಯಾಗಿರುವ ವಿಷಯ ರಂಜಿತಾಳಿಗೆ ತಿಳಿದುಬಂದಿದೆ.

ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ, ಆಕ್ರೋಶಗೊಂಡ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ.

ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಅಯ್ಯಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!