ರಾಯಚೂರು: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಧಾರ ಗ್ರಾಮದಲ್ಲಿ ಜನಪ್ರಿಯ ಶಾಸಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸನಗೌಡ ದದ್ದಲ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

KKRDB ಮೈಕ್ರೋ ಯೊಜನಡಿಯಲ್ಲಿ ಗಧಾರ ಗ್ರಾಮಕ್ಕೆ ಸರಕಾರಿ ಪ್ರೌಡ ಶಾಲಾ ಮಂಜೂರು ಹಾಗೂ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದರು.ಮತ್ತು ತಾಲೂಕ ಪಂಚ ಯತಿ ಇ ಓ ರವರಿಗೆ ಸ್ಕೂಲ್ ಕಾಂಪೌಂಡ್ ನಿರ್ಮಾಣ ಮಾಡಲು ಪ್ರಪೋಸಲ್ ನೀಡಲು ತಿಳಿಸಿದರು ಮತ್ತು ಶಾಸಕರು ಗಾದರ ಗ್ರಾಮದ ಶಾಲೆಗೆ ತೆರಳಿ ಶಾಲೆ ಮಕ್ಕಳಿಗೆ ಕಟ್ಟಡ ಬಗ್ಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಗೌಡ. ಪವನ್ ಪಾಟೀಲ್. ಶಿವಪ್ಪ ನಾಯಕ. ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.




