ಇಳಕಲ್ : ಅರ್ಬನ್ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ಬಸವರಾಜ ಶಿವಪ್ಪ ಜಾಲಿಹಾಳ ಸ್ಪರ್ಧೆ ಮಾಡಿದ್ದು 05 ರಂದು ರವಿವಾರ ಮತದಾನ ನಡೆಯಲಿದ್ದು ಬ್ಯಾಂಕಿನ ಶೇರುದಾರ ಬಂಧುಗಳು ತಮಗೆ ಅಮೂಲ್ಯವಾದ ಮತ ನೀಡುವಂತೆ ಪತ್ರಿಕಾ ಹೆಳಿಕೆ ಮೂಲಕ ಮತದಾರರಲ್ಲಿ ಮನವಿ ಮಾಡಿಕೊಂಡರು.
ಶೆರುದಾರರ ಕುರಿತು ಮಾತನಾಡಿದ ಬಸವರಾಜ್ ಜಾಲಿಹಾಳ ಈಗಾಗಲೇ ನಾನು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು ಇಳಕಲ್ ತಾಲೂಕಿನ ತುಂಬ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇಲಕಲ್ಲ ನಗರದ ಲಿಂಗವಂತ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿದ್ದು ಸಹಕಾರಿ ಕ್ಷೇತ್ರದಲ್ಲಿ ಅನುಭವವಿದೆ. ಹೀಗಾಗಿ ಇಲಕಲ್ಲ ಕೋ ಆಪರೇಟಿವ್ ಬ್ಯಾಂಕನ ಶೇರುದಾರ ಬಂಧುಗಳು ಬೆಂಬಲಿಸಿ ಅಮೂಲ್ಯವಾದ ಮತ ನೀಡಿ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸಿಕೊಂಡರು.
ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ “ಬೆಲ್ಟ್” ಚಿಹ್ನೆ ಆಗಿದ್ದು ಅನುಕ್ರಮ ಸಂಖ್ಯೆ 17 ಆಗಿದೆ.ಹಿಗಾಗಿ ನನಗೆ ಮತ ನಿಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ವರದಿ :- ದಾವಲ್ ಸೇಡಂ