Ad imageAd image

ಕರ್ನಾಟಕ ಪತ್ರಕರ್ತ ಸಂಘ ಮತ್ತು ಇಂಡಿಯನ್ ಜನರಲಿಸಂ ಯೂನಿಯನ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಬಸವರಾಜ್ ಅವರಿಗೆ ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿಯನ್ನು

Bharath Vaibhav
WhatsApp Group Join Now
Telegram Group Join Now

*ಕರ್ನಾಟಕ ಪತ್ರಕರ್ತ ಸಂಘ ಮತ್ತು ಇಂಡಿಯನ್ ಜನರಲಿಸಂ ಯೂನಿಯನ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಬಸವರಾಜ್ ಅವರಿಗೆ ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿಯನ್ನು*

*ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗಟ್ಟಿಗನೂರು ಗ್ರಾಮದಲ್ಲಿ ,1974 ರಲ್ಲಿ ಸ್ಥಾಪನೆಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಬಸನಗೌಡ ಪಾಟೀಲ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಬಸವರಾಜ್ ಅವರಿಗೆ ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ ವಿಜಯಶಂಕರ್ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾ ಶ್ರೀ ದಾನಯ್ಯಸ್ವಾಮಿ ಹಿರೇಮಠ ತಾಕೂಕ ಅಧ್ಯಕ್ಷರಾದ ದವಲಸಾಬ ಶೇಡಂ, ಅವರು ಪ್ರಧಾನ ಮಾಡಿದರು.

*2006 ರಲ್ಲಿ ಈ ಸಂಘಕ್ಕೆ ಒಬ್ಬ ಸಾಮಾನ್ಯ ಕ್ಲರ್ಕ್ ಆಗಿ ಸೇವೆ ಮಾಡುತ್ತ ಶೇಖಡ 90 ರಷ್ಟು ಸಾಲ ವಸೂಲಿ ಮಾಡಿ,ಸಂಘದ ಅಭಿವೃದ್ಧಿಗೆ ಒಲವು ನೀಡಿ ಪ್ರಾಮಾಣಿಕ ಕೆಲಸದ ಮಾಡಿ 2016 ರಲ್ಲಿ ಕಾರ್ಯದರ್ಶಿಯಾಗಿ ಪ್ರಮೋಷನ್ ಹೊಂದಿದರು. ಕಳೆದ 8 ವರ್ಷದಲ್ಲಿ ನೀರಂತರ ಸಂಘಕ್ಕೆ ಲಾಭ ತರಯವಲ್ಲಿ ಬಸನಗೌಡರ ಪಾತ್ರ, ಪ್ರಾಮಾಣಿಕ ಕರ್ತವ್ಯವನ್ನು ಪರಿಗಣಿಸಿ ಇಂದು ಈ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು.

 

ಈ ಸರಳ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಅಧ್ಯಕ್ಷರು DCC ಬ್ಯಾಂಕ್ ಯುನಿಯನ್ ಇವರು ನೆರವೇರಿಸಿದರು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಡಿ,ಬಿ,ವಿಜಯಶಂಕರ್ ವಹಿಸಿಕೊಂಡಿದ್ದರು,ವಿಶೇಷ ಆಹ್ವಾನಿತರಾಗಿ,ಶ್ರೀ ದಾನಯ್ಯಸ್ವಾಮಿ ಹಿರೇಮಠ ಹಾಗೂ ಮುಖ್ಯ ಅತಿಥಿಗಳಾಗಿ : ಶ್ರೀ B,N,ರಾಮವಾಡಗಿ,ಶ್ರೀ M,B,ಹುಬ್ಬಳ್ಳಿ,ಶ್ರೀ B,N,ಪಾಟೀಲ,ಈ ಸಂಘದ ಅಧ್ಯಕ್ಷರಾದ ಶ್ರೀ ಗುರುಸಂಗಯ್ಯ ಹಿರೇಮಠ,ಶ್ರೀ ದವಲಸಾಬ ಶೇಡಂ, ಶ್ರೀ ಹನಮಗೌಡ ಹೊಸಮನಿ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!