ಮೊಳಕಾಲ್ಮೂರು: ಈ ನಾಡಿನ ಎಲ್ಲಾ ಸಮುದಾಯಗಳು ಎಲ್ಲಾ ವೈಮನಸ್ಸನ್ನು ಮರೆತು ಸಂಘಟಿತರಾಗುತ್ತಿದ್ದಾರೆ. ಆದರೆ ಡಾ ಬಿ. ಆರ್. ಅಂಬೇಡ್ಕರ್ ಅವರ ಆಶಯಗಳಂತೆ ನಡೆಯುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮಾತ್ರ ಯಾವುದರ ಬಗ್ಗೆನೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಶ್ರೀ ಜಗದ್ಗುರು ಡಾ ವಾಲ್ಮೀಕಿ ಪ್ರಸನ್ನ ನಂದಾಪುರಿ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.

ಮೊಳಕಾಲ್ಮೂರು ತಾಲೂಕಿನ ರಾಯಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ನೂತನ ರಥೋತ್ಸವ, ಕಳಸ ಪ್ರತಿಷ್ಠಾಪನೆ, ಊರು ಮಾರಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಾಲ್ಮೀಕಿ ಪುತ್ಥಳಿಯ ಅನಾವರಣಗೊಳಿಸಿ ಪೂಜಿ ಸಲ್ಲಿಸಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ಈ ರಾಜ್ಯದ ಎಲ್ಲಾ ಸಮುದಾಯಗಳು ಸ್ವತಂತ್ರ ನಾಯಕರ ಹೆಸರಲ್ಲಿ ಸಂಘಟಿತರಾಗುತ್ತಿದ್ದಾರೆ, ಸ್ವತಂತ್ರ ಬಂದು 78 ವರ್ಷ ಕಳೆದರೂ ಬಹುತೇಕ ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ 151 ಸಮುದಾಯಗಳಿಗೆ ಡಾ ಬಿ ಆರ್ ಅಂಬೇಡ್ಕರ್ ಅವರ ಬಹುತೇಕ ಈ ಸಮುದಾಯಗಳು ಮುಖ್ಯ ವಾಹಿನಿಯಿಂದ ದೂರ ಉಳಿದಿದೆ ಅದಕ್ಕೆ ಮುಖ್ಯವಾದ ಕಾರಣ ಜಾತಿ, ಜಾತಿಯ ಕಾರಣದಿಂದ ಅನೇಕ ಶತಮಾನಗಳಿಂದ ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿದೆ.
ಈ ಸಮುದಾಯಗಳು ಕೂಡ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ರಾಜಕೀಯ ಮುಂದೆ ಬರಬೇಕು ಎಂದು ಸಂವಿಧಾನವನ್ನು ಕೊಟ್ಟಿದ್ದಾರೆ, ನಮ್ಮನ್ನಾಳುವಂತಹ ಸರ್ಕಾರಗಳು ಚುನಾವಣೆಗೆ ನಮ್ಮನ್ನು ಬಳಸಿಕೊಂಡು ನಮ್ಮನ್ನು ಮರೆತುಬಿಡುತ್ತಾರೆ, ಅನೇಕ ಸಮುದಾಯದವರು ಎಸ್ ಟಿ ಪಟ್ಟಿಗೆ ಸೇರಲು ಆತುರಿಯುತ್ತಿದ್ದಾರೆ, ತಳವಾರ ಪರಿವಾರ ಎಂಬ ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಅನೇಕ ಕಡೆಗಳಲ್ಲಿ ತೆಗೆದುಕೊಂಡಿದ್ದಾರೆ. ವಾಲ್ಮೀಕಿ ಸಮಾಜದವರು ಎಚ್ಚೆತ್ತುಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದರು. ಇಂತಹ ಚಿಕ್ಕದಾದ ಊರಿನಲ್ಲಿ ಇಂತಹ ಕಾರ್ಯಕ್ರಮ ಮಾಡಿರುವುದು ತುಂಬಾ ಸಂತೋಷದ ವಿಚಾರ ಎಂದು ರಾಯಪುರ ಗ್ರಾಮದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖ ಮಠ ಸಿದ್ದಯ್ಯನ ಕೋಟೆ, ಶ್ರೀ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ನಾವು ಸಮಾಜದಲ್ಲಿ ಬದಲಾವಣೆಯಾಗಬೇಕು, ಇದು ನಮ್ಮ ಕಾರ್ಯಕ್ರಮ ಎಂಬ ಮನೋಭಾವದಿಂದ ಎಲ್ಲರೂ ಸೇರಿಕೊಂಡು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ಸಮಾಜಕ್ಕೆ ಉತ್ತಮ ಸ್ವಾಮೀಜಿಗಳು ಸಿಕ್ಕಿದ್ದಾರೆ. ಆದ್ದರಿಂದ ಸಮಾಜ ಸಂಘಟಿತರಾಗಬೇಕು ಬೇರೆ ಸಮಾಜದವರು ಉನ್ನತ ಮಟ್ಟಕ್ಕೆ ಹೋಗುತ್ತಾರೆ, ಅವರ ಆಲೋಚನೆಗಳು ಉನ್ನತ ಮಟ್ಟಕ್ಕೆ ಇರುತ್ತದೆ, ಆದ್ದರಿಂದ ಶೋಷಿತ ಸಮಾಜದವರು ಮುಖ್ಯ ವಾಹಿನಿಗೆ ಬರಬೇಕು ಎಂದರು.
ರಾಯಪುರ ಗ್ರಾಮದ ಹಿರಿಯ ಮುಖಂಡರಾದ ಪಟೇಲ್ ಜಿ ಪಾಪ ನಾಯಕ್ ಮಾತನಾಡಿದರು, ಮತ್ತು ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಎನ್ ವೈ ಚೇತನ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿಪಿ ಸುರೇಶ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ನಂತರ ವಿಶೇಷವಾಗಿ ಶ್ರೀ ಸಾಂಬಾರ್ ಶಿವಯ್ಯ, ಅನ್ನಪೂರ್ಣ ಆಗ್ರೋ ಕೆಮಿಕಲ್ಸ್ ಮೊಳಕಾಲ್ಮುರು ಇವರಿಂದ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ದ್ರಾಕ್ಷ ರಸ ಮತ್ತು ವೈನ್ ಮಂಡಳಿ ಅಧ್ಯಕ್ಷರಾದ ಡಾ. ಬಿ ಯೋಗೇಶ್ ಬಾಬು, ವಿ ಮಾರನಾಯಕ ಜಗಳೂರಯ್ಯ , ರಘು ಮೂರ್ತಿ, ರಾಯಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ ಧನಂಜಯ, ರಾಯಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸರ್ವ ಸದಸ್ಯರು ಮುಖಂಡರುಗಳಾದ ಪಿ ಒ ಮುತ್ತಯ್ಯ, ಓಬಣ್ಣ, ಸಿದ್ದಣ್ಣ, ವೈ ಡಿ ಕುಮಾರಸ್ವಾಮಿ, ದೊಡ್ಡ ಓಭಯ್ಯ, ಪಾಪಣ್ಣ, ರೇವಣ್ಣ,ಗುಂಡ, ಪಾಲಯ್ಯ ಪ್ರಹಲ್ಲಾದ, ಓಬಳೇಶ, ವಿಜಯ್, ಇನ್ನು ಹಲವರು ಮಹಿಳೆಯರು ಉಪಸ್ಥಿತರಿದ್ದರು.
ವರದಿ: ಪಿ.ಎಂ. ಗಂಗಾಧರ




