ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಉರುಸ ಕಾರ್ಯಕ್ರಮಕ್ಕೆ ಆಗಮಿಸಿದ ಬಸ್ಸನಗೌಡ ದದ್ದಲ್
ಯಾರಗೇರಾ ಗ್ರಾಮದ ಶ್ರೀ ಹಜರತ್ ದರ್ಗ ಬಡೆಸಬ್ ಉರುಸು ಅಂಗವಾಗಿ ರಾಯಚೂರು ಗ್ರಾಮಾಂತರ ಶಾಸಕರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಸನಗೌಡ ದದ್ದಲ ರವರು ಮತ್ತು,ಕೆಪಿಸಿಸಿ ಕಾರ್ಯಧ್ಯಕ್ಷರಾದ ಶ್ರೀ A ವಸಂತಕುಮಾರ , ಮತ್ತು ಲೋಕಸಭಾ ಸದಸ್ಯರಾದ ಶ್ರೀ ಜಿ ಕುಮಾರ ನಾಯಕ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ಇಟಗಿ, ರವರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಹಜರತ್ ಬಡೆಸಬ್ ದರ್ಗಾದಲ್ಲಿ ಆರ್ಶಿವಾದವನ್ನು ಪಡೆದರು.
ಈ ಸಂಧರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಗ್ರಾಮಸ್ಥರು ಭಕ್ತಾಧಿಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನ ಗೌಡ