ಹಾವೇರಿ :-ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸುವರಾಜ ಬೊಮ್ಮಾಯಿ ಅವರು ಹಾವೇರಿ ಕಾಂಗ್ರೆಸ್ ಅಭ್ಯರ್ಥಿಯಾದ ಅನಂದಸ್ವಾಮಿ ಗಡ್ಡದೇವರಮಟ್ ಅವರ ವಿರುದ್ಧ ಅದ್ದೂರಿ ಜಯ ಸಾಧಿಸಿದ್ದಾರೆ. ಹಾವೇರಿ ಜಿಲ್ಲೆಯು ಮಾಜಿ ಮುಖ್ಯಮಂತ್ರಿಗಳಾದ ಬಸುವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಎಂದೇ ಪ್ರಸಿದ್ದಿ ಪಡೆದಿದೆ.
ಈ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಎಂಎಲ್ಎ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದಾರೆ ಮತ್ತು ಹಾವೇರಿ ಜಿಲ್ಲೆಯನ್ನು ಸುಧಾರಣೆ ಮಾಡುವಲ್ಲಿ ಅತ್ಯಂತ ಯಶಸ್ವಿ ಆಗಿದ್ದಾರೆ.ಹಾವೇರಿ ಜಿಲ್ಲೆಯಲ್ಲಿಯ ಶಿಗ್ಗಾಂವಿ ಮತ್ತು ಸವಣೂರು ಕ್ಷೇತ್ರದ ಬಿಜೆಪಿಯ ವಿಧಾನಸಭಾ ಸದಸ್ಯ ಸ್ಥಾನವನ್ನು ಬಿಟ್ಟು ಇದೆ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿಯಾದ ಅನಂದಸ್ವಾಮಿ ಗಡ್ಡದೇವರಮಟ್ಟ ರವರು ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿ ರವರ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ
ವರದಿ:- ರಮೇಶ್ ತಾಳಿಕೋಟಿ