ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ ವತಿಯಿಂದ ವಿಶೇಷ ಚೇತನರಿಗೆ ನೀಡಲಾದ ಸಲಕರಣೆಗಳನ್ನು ಶಾಸಕ ಬಿ.ಎಮ್.ನಾಗರಾಜ ಅವರು ವಿತರಣೆ ಮಾಡಿದರು.
ಕೇಂದ್ರ ಸರ್ಕಾರದ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ತಾಲೂಕು ವ್ಯಾಪ್ತಿಯಲ್ಲಿ ಬ್ಯಾಟರಿ ಚಾಲಿತ ಮೂರು ಚಕ್ರಗಳ ಬೈಸಿಕಲ್ ಹಾಗೂ ಇನ್ನಿತರ ಸಲಕರಣೆಗಳು ಬಂದಿದ್ದು, ಸಾಂಕೇತಿಕವಾಗಿ 15 ಫಲಾನುಭವಿಗಳಿಗೆ ಶಾಸಕರಿಂದ ವಿತರಿಸಲಾಯಿತು ಎಂದು ಎಮ್.ಆರ್.ಡಬ್ಲೂ ಸಾಬೇಶ ನಾಯಕ ತಿಳಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ. ಉಪಾಧ್ಯಕ್ಷೆ ಯಶೋದಾಮೂರ್ತಿ, ಪೌರಾಯುಕ್ತ ಗಂಗಾಧರ, ನಗರಸಭೆ ಸದಸ್ಯ ಬಿ.ಎಮ್.ಅಪ್ಪಾಜಿ ನಾಯಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪವನ್‌ಕುಮಾರ್.ಎಸ್.ದಂಡಪ್ಪನವರ್ ಹಾಗೂ ವಿಕಲಚೇತನರ ವಿವಿದ್ದೋಶ ಯೋಜನೆಯ ಕಾರ್ಯಕರ್ತರಾದ ಈರಮ್ಮ, ಈರನಾಗಪ್ಪ, ವಣೆಪ್ಪ, ದೊಡ್ಡಬಸಪ್ಪ, ಸರಸ್ವತಿ, ಲಕ್ಷ್ಮಿ, ಬಿ.ನೇತ್ರಾವತಿ ಇದ್ದರು.
ವರದಿ : ಶ್ರೀನಿವಾಸ ನಾಯ್ಕ. ಸಿರುಗುಪ್ಪ
ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಮೂರು ಚಕ್ರ ಬೈಸಿಕಲ್ ವಿತರಣೆ




