ತುರುವೇಕೆರೆ : ಪಟ್ಟಣದ ಬಾವಿಕೇರಿಯಲ್ಲಿ ಶ್ರೀ ಸತ್ಯಗಣಪತಿ ಯುವಕ ಸೇವಾ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ಸತ್ಯಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಭಾದ್ರಪದ ಶುಕ್ಲ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ಸತ್ಯಗಣಪತಿ ಸ್ವಾಮಿಯನ್ನು ಹಾಗೂ ಶ್ರೀ ಕಾಳಿಕಾಂಬ ದೇವಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಿಟ್ಟಿಮೇಳ, ಲಿಂಗದೇವರ ಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ನಂತರ ಪಟ್ಟಣದ 12ನೇ ವಾರ್ಡಿನಲ್ಲಿರುವ ಕಲ್ಯಾಣಿಯಲ್ಲಿ ಶ್ರೀ ಸತ್ಯಗಣಪತಿ ಸ್ವಾಮಿಯವರ ವಿಸರ್ಜನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜ್, ಯುವಕ ಸಂಘದ ಶಂಕರ್, ಅಶೋಕ್, ಸುರೇಶ್, ಶಂಕರಣ್ಣ, ಜಯರಾಮು, ಅಭಿ, ಸುನಿಲ್, ಸೋಮಶೇಖರ್, ಸತೀಶ್, ನರಸಿಂಹ ಸೇರಿದಂತೆ ಬಾವಿಕೆರೆಯ ಮಹಿಳೆಯರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




