ಕ್ಯಾಂಟ್ ಬರ್ರಿ ( ಇಂಗ್ಲೆಂಡ್) : ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ ತಂಡಗಳ ನಡುವೆ ಇಲ್ಲಿ ನಡೆದ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯ ಡ್ರಾ ದತ್ತ ಸಾಗಿದೆ.
ಭಾರತ ಎ 557 ರನ್ ವಿಶಾಲ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ಇಂಗ್ಲೆಂಡ್ ಲಯನ್ ತಂಡ ಮೂರನೇ ದಿನದಾಟ ಮುಗಿದಾಗ 7 ವಿಕೆಟ್ ಗೆ 527 ರನ್ ಗಳಿಸಿದೆ. ಭಾರತ ಎ ತಂಡದ ಮೊದಲ ಇನ್ನಿಂಗ್ಸ್ ಮೊತ್ತವನ್ನು ದಾಟಬೇಕಾದರೆ ಇಂಗ್ಲೆಂಡ್ ಎ ತಂಡಕ್ಕೆ ಇನ್ನು 30 ರನ್ ಗಳ ಅಗತ್ಯವಿದ್ದು, ಕೈಯಲ್ಲಿ 3 ವಿಕೆಟ್ ಗಳನ್ನು ಹೊಂದಿದೆ. ಹೀಗಾಗಿ ಪಂದ್ಯ ಡ್ರಾ ದತ್ತ ಸಾಗಿದ ಎಲ್ಲ ಲಕ್ಷಣಗಳಿವೆ.




