ಬೆಂಗಳೂರು : ಒಬ್ಬರೇ ಮೇಯರ್ ಸಾಕು, ಮೂರು ಮೇಯರ್ ಬೇಡ, ನಾಗರಿಕರಿಂದ ಹೋರಾಟ, ಬೆಂಗಳೂರು ಬಂದ್ ಮಾಡಲಾಗುವುದು, ಜೈಲಿಗೆ ಹೋಗಲು ಸಿದ್ದ-ವಾಟಾಳ್ ನಾಗರಾಜ್,
ಅವರು ಬೆಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ಗ್ರೇಟರ್ ಬೆಂಗಳೂರು ವಿರೋಧಿಸಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.
ವಾಟಾಳ್ ನಾಗರಾಜ್ ಮಾತನಾಡಿ ಗ್ರೇಟರ್ ಬೆಂಗಳೂರು ಕರ್ನಾಟಕ ಸರ್ಕಾರ ಹೊಸದಾಗಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೂ ಮುಂಚೆ ಬಿಬಿಎಂಪಿ ಮತ್ತು ನಗರ ಸಭೆ ಇತ್ತು.
64ಮತ್ತು 73ರಲ್ಲಿ ನಗರಸಭೆಯಲ್ಲಿ ನಾನು ಸದಸ್ಯನಾಗಿದ್ದೇ. ಗ್ರೇಟರ್ ಬೆಂಗಳೂರು ಬೇಕಾಗಿರಲ್ಲಿಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಚಿಂತನೆ ಮಾಡಬೇಕು.
ಬೆಂಗಳೂರು ನಗರದ ನಾಗರಿಕರಿಗೆ ಅಪಶುಕುನ, ಕೆಟ್ಟಸಂಸ್ಕೃತಿ ನಾಂದಿಯಾಗಿದೆ.ಚುನಾವಣೆ ಮುಂದೂಡಿಕೆ ಮಾಡುವ ತಂತ್ರವಾಗಿದೆ.
ಗ್ರೇಟರ್ ಬೆಂಗಳೂರುನಿಂದ ಆನಾಹುತವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿಯಾಗಿರುತ್ತಾರೆ.
ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷ ಅಧಿಕಾರ ಚುಕ್ಕಾಣೆ ಹಿಡಿದರು ನಮಗೆ ಸಂಭದವಿಲ್ಲ. ಸ್ಥಳೀಯ ಜನಪ್ರತಿನಿಧಿ ಇದ್ದರೆ ಅವರೆ ಸಮಸ್ಯೆಗಳನ್ನು ನೋಡುತ್ತಾರೆ ಅದರೆ ಇವಾಗ ಸಮಸ್ಯೆ ಕೇಳುವವರಿಲ್ಲ.
ಗುಂಡಿ ಬೆಂಗಳೂರು ಆಗಿದೆ, ಮೊದಲು ಗುಂಡಿ ಮುಚ್ಚುವ ಕೆಲಸವಾಗಬೇಕು. ಕನಕಪುರ, ರಾಮನಗರ ಹಲವಾರು ಪ್ರದೇಶಗಳನ್ನು ಸೇರಿಸುವುದರಿಂದ ಪರಿಹಾರ ಸಾಧ್ಯವಿಲ್ಲ.
ಮಹಾಪೌರರು ಒಬ್ಬರೇ ಇದ್ದರೆ ಮೂರು ಮೇಯರ್ ಇದ್ದರೆ ಎತ್ತು ಎರಿಗೆ ಏಳಿಯಿತು, ಕೋಣ ನೀರಿಗೆ ಇಳಿಯಿತು ಎಂಬತಾಗುತ್ತದೆ.
ಗ್ರೇಟರ್ ಬೆಂಗಳೂರು ವಿರುದ್ದ ಬೃಹತ್ ಸಾರ್ವಜನಿಕರಿಂದ ಚಳುವಳಿ ಮಾಡಲಾಗುವುದು.
ನಾಡಪ್ರಭು ಕೆಂಪೇಗೌಡರ ಇತಿಹಾಸಕ್ಕೆ ಗ್ರೇಟರ್ ಬೆಂಗಳೂರು ಕೆಟ್ಟ ಸಂಪ್ರಾದಾಯ ಹಾಕಿಕೊಟ್ಟಂತೆ ಆಗುತ್ತದೆ, ಬಿಬಿಎಂಪಿ ಚುನಾವಣೆ ಮಾಡಿ , ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದರೆ ಬೆಂಗಳೂರು ಬಂದ್ ಕರೆ ನೀಡಲಾಗುವುದು ಎಂದು ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವರದಿ : ಅಯ್ಯಣ್ಣ ಮಾಸ್ಟರ್




