Ad imageAd image

ನೀವು ಶುಂಠಿ ಚಹಾ ಕುಡಿಯುತ್ತಿರಾ? ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ

Bharath Vaibhav
ನೀವು ಶುಂಠಿ ಚಹಾ ಕುಡಿಯುತ್ತಿರಾ? ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ
WhatsApp Group Join Now
Telegram Group Join Now

ಚಹಾ ಎಂದರೆ ಬಹಳಷ್ಟು ಜನರಿಗೆ ಎನರ್ಜಿ ಡ್ರಿಂಕ್ಸ್ ಇದ್ದಂತೆ. ಬೇಸಿಗೆ, ಚಳಿಗಾಲ ಯಾವುದೇ ಇರಲಿ ಜನರ ದಿನಚರಿ ಪ್ರಾರಂಭವಾಗುವುದು ಚಹಾದೊಂದಿಗೆ. ಬೆಳಿಗ್ಗೆ ಶುಂಠಿ ಚಹಾ ಕುಡಿಯುವುದರಿಂದ ದೇಹದಲ್ಲಿ ಹೊಸ ಚೈತನ್ಯ ಹುಟ್ಟುತ್ತೆ ಎಂದು ಎಷ್ಟೋ ಜನ ಹೇಳ್ತಾರೆ. ಪದೆ ಪದೆ ಶುಂಠಿ ಚಹಾ ಕುಡಿಯುವ ಅಭ್ಯಾಸ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಬೇಸಿಗೆ ಕಾಲದಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಆಗುವ ಅನಾನುಕೂಲಗಳು

ಹೊಟ್ಟೆಯ ಕಿರಿಕಿರಿ 
ಶುಂಠಿಯಲ್ಲಿ ಜಿಂಜರಾಲ್ ಅಂಶ ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ಆದರೆ ಅದರ ಹೆಚ್ಚುವರಿ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸಿ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ.

ರಕ್ತದೊತ್ತಡ
ರಕ್ತದೊತ್ತಡ ಕಡಿಮೆ ಇದ್ದವರು ಶುಂಠಿ ಚಹಾ ಕುಡಿಯುವುದು ಸೂಕ್ತವಲ್ಲ. ಇದು ತಲೆತಿರುಗುವಿಕೆ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು. ಆದರೆ ಶುಂಠಿ ಚಹಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಪ್ರಯೋಜನ ಎಂದು ಹೆಳಲಾಗುತ್ತದೆ.

ನಿದ್ರಾಹೀನತೆ
ಶುಂಠಿ ಚಹಾ ಅತಿಯಾಗಿ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗಬಹುದು. ನಿದ್ರೆಯ ಕೊರತೆಯು ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಅತಿಸಾರ
ಶುಂಠಿ ಚಹಾ ಅತಿಯಾದ ಸೇವನೆಯಿಂದ ಅತಿಸಾರದ ಸಮಸ್ಯೆ ಉಂಟಾಗಬಹುದು. ಅತಿಸಾರವು ದೇಹವನ್ನು ದುರ್ಬಲಗೊಳಿಸುತ್ತದೆ. ಬೇಸಿಗೆಯಲ್ಲಿ ಅತಿಸಾರ ಸಮಸ್ಯೆ ಪರಿಸ್ಥಿತಿಯನ್ನು ಹೆಚ್ಚು ಗಂಭೀರಗೊಳಿಸುತ್ತದೆ.

ರಕ್ತಸ್ರಾವದ ಅಪಾಯ
ರಕ್ತಸ್ರಾವದ ಅಸ್ವಸ್ಥತೆ ಹೊಂದಿರುವ ಜನರು ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು, ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ, ಈಗಾಗಲೇ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!