ಚಿಕ್ಕೋಡಿ :- ಇಂಗಳಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸುನೀಲ ಪುಂಡಲೀಕ ಪಾಟೋಳೆ ಮತ್ತು ಉಪಾಧ್ಯಕ್ಷರಾಗಿ ಬೀಬಾತಾಯಿ ಅಪ್ಪಾಸಾಬ ಶಿಂಧೆ ಅವೀರೋಧವಾಗಿ ಆಯ್ಕೆಗೊಂಡಿದ್ದಾರೆ.
ಇಂದು ಸಹಕಾರಿ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಈ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ಈ ಸಮಯುದಲ್ಲಿ ರಾಜಾರಾಮ ಮಾನೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ನಂತರ ಅಪ್ಪಾಸಾ ಸೌಂದಲಗೆ, ಡಾ. ವಿನಾಯಕ ಮುತಾಲಿಕ, ಡಾ. ಅಜೀತ ಚಿಗರೆ, ಬಾಪುಸಾಹೇಬ ರಾಮದುರ್ಗ ತಮ್ಮ ಅನಿಸಿಕೆಗಳು ಹಂಚಿಕೊಂಡು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.ನಂತರ ನೂತನ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಗ್ರಾಮದ ಹಿರಿಯರಿಂದ, ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಸುನೀಲ ಪಾಟೋಳೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘದ ಪ್ರಗತಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿಯ ಸದಸ್ಯರಾದ ಡಾ. ಅಜೀತ ಚಿಗರೆ, ಮಾರುತಿ ಪವಾರ, ಹೂವಣ್ಣಾ ಚೌಗುಲೆ. ಬಸಪ್ಪಾ ಕಾಂಬಳೆ, ಸುಭಾಶ ಘೋಸರವಾಡೆ ಸೇರಿದಂತೆ ಮುಖಂಡರಾದ ಗಣಪತಿ ಧನವಡೆ, ಅಪ್ಪಾಸಾಬ ಮಿರ್ಜೆ, ಅಪ್ಪಾಸಾಬ ಜತ್ರಾಟೆ, ಸುಭಾಶ ಖೋತ, ಬಾಬಾಸಾಬ ಜುಗೂಳೆ, ಬಾಬಾಸಾಬ ದಾಬಡೆ, ತಾತ್ಯಾಸಾಬ ಚೌಗುಲಾ, ಸದಾಶಿವ ಕುಡಚೆ, ಶಶಿಕಾಂತ ಧನವಾಡೆ, ಸುಭಾಶ ಉನ್ನಾಳೆ, ಅಣ್ಣಾಸಾಬ ಡಿಗ್ರಜೆ, ವಾಲ್ಮೀಕ ಮಾನೆ, ರಮೇಶ ಮುರಚಟ್ಟೆ, ಧೋಂಡಿಬಾ ಪವಾರ, ಗುಂಡಾ ಅಲಾಸೆ, ಸಂಜಯ ಮಾನೆ, ಸಿದ್ರಾಮ ಶೇಳಕೆ, ಪುಂಡಲೀಕ ಜತ್ರಾಟೆ, ತುಕಾರಾಮ ಧಾಬಡೆ, ಅಣ್ಣಾಸಾಬ ಮಾನೆ, ಸುಧೀರ ಮೋರೆ, ಆತ್ಮಾರಾಮ ಮಾನೆ, ಸಂಜಯ ಐನಾಪೂರೆ, ರಾಜು ಗುರವ, ಪ್ರಕಾಶ ಶೆಟ್ಟಿ ಹಾಗೂ ಸಂಘದ ಸದಸ್ಯರು, ರೈತರು, ಗ್ರಾಮದ ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕದರ್ಶಿ ಮಹಾಂತೇಶ ಶುಂಠೆ ವಂದಿಸಿದರು.
ವರದಿ:- ರಾಜು ಮುಂಡೆ