ಶಾಂತಿನಗರ ಸರ್ಕಲ್ ಹಾಗೂ ಮಂದಿರ ಪ್ರವೇಶ ದ್ವಾರಕ್ಕೆ 250 ಕೆಜಿ ಚಂಡು ಹೂಮಾಲೆ ಅರ್ಪಣೆ

ನಿಪ್ಪಾಣಿ: ತಾಲೂಕಿನ ಬೇಡಕಿಹಾಳದ ಸಿದ್ದೇಶ್ವರ ದಸರಾ ಉತ್ಸವ ಪ್ರಯುಕ್ತ ಸಿದ್ದೇಶ್ವರ ಹಾರ್ ಕಮಿಟಿಯ ವತಿಯಿಂದ ಗ್ರಾಮದ ಪೊಲೀಸ್ ಪಾಟೀಲರಾದ ದಿವಂಗತ ಪ್ರಶಾಂತ ಪಾಟೀಲರ ಸ್ಮರಣಾರ್ಥ ಅವರ ಮೊಮ್ಮಗ ಪ್ರಣವ್ ಪ್ರಶಾಂತ ಪಾಟೀಲ್ ಹಾಗೂ ಋಷಿಕೇಶ್ ಇನಾಮದಾರ ಇವರ ಕೃಪಾ ಆಶೀರ್ವಾದದಿಂದ ಶಮನೇ ವಾಡಿ ಬೇಡಕಿಹಾಳ ಸರ್ಕಲ್ ನಲ್ಲಿರುವ ಮುಖ್ಯ ಸಿದ್ದೇಶ್ವರ ಪ್ರವೇಶದ್ವಾರ ಹಾಗೂ ಮಂದಿರ ಪ್ರವೇಶ ದ್ವಾರಕ್ಕೆ 250 ಕೆಜಿ ತೂಕದ ಚೆಂಡು ಹೂಗಳ ಸುಂದರಮಾಲೆಯಿಂದ ಅಲಂಕರಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಬೆಳಿಗ್ಗೆ ಇನಾಮದಾರ ಹಾಗೂ ಪಾಟೀಲರ ಹೊಲದಲ್ಲಿಯ ಚಂಡು ಹೂ ಸಂಗ್ರಹಿಸಿ ಮಂದಿರ ಪ್ರವೇಶ ದ್ವಾರಕ್ಕೆ 150 ಕೆಜಿ ಹಾಗೂ ಶಾಂತಿನಗರ ಸರ್ಕಲ್ ದಲ್ಲಿರುವ ಮುಖ್ಯಪ್ರವೇಶ ದ್ವಾರಕೆ 100 ಕೆಜಿ ಹೀಗೆ ಒಟ್ಟು 250 ಕೆಜಿ ಪುಷ್ಪಗಳಿಂದ ತಯಾರಿಸಿದ ಸುಂದರ ಹೂಮಾಲೆ ಹಾಕಿದರು. ಈ ಸಂದರ್ಭದಲ್ಲಿ ಹಾರ ಕಮಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




