ಮೊಳಕಾಲ್ಮುರು : ಆಸ್ಪತ್ರೆಯಲ್ಲಿ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರೇ ಇಲ್ಲದೆ, ಜನರು ದೂರದ ಪಟ್ಟಣಗಳಿಗೆ ಹೋಗುವಂತಹ ಸ್ಥಿತಿ ಈ ಭಾಗದ ಜನರಿಗೆ ಸಾಮಾನ್ಯವಾಗಿತ್ತು, ಅಂದು ಈ ಭಾಗದಲ್ಲಿ ಜನರಿಗೆ ವೈದ್ಯಕೀಯ ಸೌಲಭ್ಯ ಸಿಗುವಂತಾಗಲು ಎಂದು ರೈತ ಮುಖಂಡರಾದ ಬೇಡರೆಡ್ಡಿಹಳ್ಳಿಯ ಬಸವರೆಡ್ಡಿಯವರ ನೇತೃತ್ವದಲ್ಲಿ ವೈದ್ಯರ ನೇಮಕಕ್ಕೆ ಒತ್ತಾಯಿಸಿ ಹೋರಾಟ ಮಾಡಿ 48 ಜನ ರೈತರು ಹಾಗೂ ಕೂಲಿ ಕಾರ್ಮಿಕರು ಸೇರಿ 15 ದಿನ ಬಳ್ಳಾರಿ ಜೈಲಿಗೆ ಹೋಗಿದ್ದದ್ದು ಇತಿಹಾಸ, ಅದರ ಪರಿಣಾಮ ಅಂದು ಆರೋಗ್ಯ ಸಚಿವರಾಗಿದ್ದಾ ಕಾಗೋಡು ತಿಮ್ಮಪ್ಪ ಹಾಗೂ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣರವರ ಶಿಫಾರಸ್ಸಿನಂತೆ ತಜ್ಞ ವೈದ್ಯರನ್ನು ನೇಮಿಸಿ ಅಂದಿನಿಂದ ಇಂದಿನವರೆಗೂ ರೋಗಿಗಳಿಗೆ ವ್ಯವಸ್ಥಿತವಾಗಿ ಸೌಲಭ್ಯ ನೀಡುತ್ತಾ ಬಂದಿದೆ.
ಇತ್ತೀಚೆಗೆ ಮೊಳಕಾಲ್ಮುರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ, ಇರುವ ಜನರೇಟರ್ ಸುಮಾರು ದಿನಗಳ ಹಿಂದೆಯೇ ಕೆಟ್ಟು ಹೋಗಿದ್ದು, ಇದರಿಂದ ತುರ್ತು ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಅನಾನುಕೂಲವಾಗುತ್ತಿದೆ. ಇತ್ತೀಚೆಗೆ ವಿದ್ಯುತ್ ಕಡಿತಗೊಂಡಾಗ ರಾತ್ರಿ ವೇಳೆ ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ.ಇದಕ್ಕೆ ಸಂಬಂಧಪಟ್ಟ ಆಡಳಿತ ವೈದ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ವೈದ್ಯರು ರೋಗಿಗಳ ಜೀವನದ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ರೈತ ಸಂಘಟನೆಗಳು ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಇಂತಹ ಸಮಸ್ಯೆಗಳನ್ನು ತಕ್ಷಣವೇ ಮೇಲಾಧಿಕಾರಿಗಳು ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಅವರು ಸರ್ಕಾರದ ಜೊತೆ ಮಾತಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆಯಾಗಿರುವುದಕ್ಕೆ
ವೈದ್ಯಾಧಿಕಾರಿಗಳು ಹೊಣೆಯಾಗಿರುತ್ತಾರೆ. ಆದರೆ ರೋಗಿಗಳ ಸಂಬಂಧಿಕರ ಮೇಲೆ ಹಾಗೂ
ಸಮಯದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಆರೋಪ ಮಾಡಿರುತ್ತಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ವರ್ಗದವರಿಗೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ
ಅದೇ ರೀತಿ ಮೊಳಕಾಲ್ಕುರು ಆಸ್ಪತ್ರೆಯಲ್ಲಿ ನೆಲಕ್ಕೆ ಹಾಕಿರುವ ಬಂಡೆಗಳು ಇನ್ನು 25 ವರ್ಷವಾದರೂ ಏನು ಆಗುತ್ತಿರಲಿಲ್ಲ, ಆದರೆ ಬಿ.ಜೆ.ಪಿ. ಪಕ್ಷದ ಹಗ್ಗದ ಗುತ್ತಿಗೆದಾರರು ಚೆನ್ನಾಗಿರುವ ಬಂಡೆ ತಗೆದು, ಲಕ್ಷಾಂತರ ನಕಲು ಬಿಲ್ ಮಾಡಿಸಿದ್ದಾರೆ, ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಎಂದು ಆಸ್ಪತ್ರೆ
ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ರೈತರು ಜೈಲಿಗೆ ಹೋದಾಗಲು ಬಿ.ಜೆ.ಪಿ. ಮುಖಂಡರು ಸೌಜನ್ಯಕ್ಕಾದರೂ ಬೆಂಬಲ ನೀಡಿಲ್ಲ ಇಂತವರು ರಾಜಕಾರಣಕ್ಕೆ ವಿನಾಕಾರಣ ಸುಳ್ಳು ಸುದ್ದಿ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿರುವುದನ್ನು ನಿಲ್ಲಿಸಿ ಸಮಸ್ಯೆಗಳನ್ನು ಸರ್ಕಾರಕ್ಕೆ ಎಷ್ಟು ಕಾಳಜಿ ಇದೇಯೋ, ಅಷ್ಟೇ ವಿರೋಧ ಪಕ್ಷಕ್ಕೂ ಜವಾಬ್ದಾರಿ ಇರುತ್ತದೆಂದು ತಿಳಿದು ಕೆಲಸ ಮಾಡಬೇಕು.
ಬಡವರ ಆರೋಗ್ಯದ ಬಗ್ಗೆ ಚೆಲ್ಲಾಟವಾಡದೇ ರಾಜಕಾರಣ ನಿಲ್ಲಿಸಿ ಆಸ್ಪತ್ರೆ ಅಭಿವೃದ್ಧಿ
ಪಡಿಸಬೇಕೆಂದು ಚುನಾಯಿತ ಪ್ರತಿನಿಧಿಗಳನ್ನು ಒತ್ತಾಯಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು
ಸರ್ಕಾರಿ ಸರ್ವಜನಿಕ ಆಸ್ಪತ್ರೆ ವೈದ್ಯರ ಹುದ್ದೆ ಖಾಲಿ ಇದ್ದು ತುಂಬುವ ಕೆಲಸ ಮಾಡಿ ಸಾರ್ವಜನಿಕರಿಗೆ ಸಹಕಾರ ಮಾಡಿ ಎಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷರು ಎಸ್ ಮಂಜುನಾಥ್, ಕಾರ್ಯಧ್ಯಕ್ಷರು ಎಸ್ ಟಿ ಮಂಜುನಾಥ್, ಕನಕ ಶಿವಮೂರ್ತಿ, ಮೇಸ್ತ್ರಿ ಪಾಪಾಯ್ಯ, ಡಿ ಬಿ ಕೃಷ್ಣ ಮೂರ್ತಿ, ಸಣ್ಣಪ್ಪ, ಈರಣ್ಣ, ಬೆಳಗಲ್ ಗುರುಸ್ವಾಮಿ, ಕುರಾಕಾಲ ಹಟ್ಟಿ ನಾಗರಾಜ್ ಗೌಥಮ್, ದಾನಸೂರಯ್ಯ, ನೇರಳಹಳ್ಳಿ ನಾಗರಾಜ್ ಇನ್ನಿತರರು ಭಗಕಾಗಿಸಿದ್ದರು.
ವರದಿ: ಪಿಎಂ ಗಂಗಾಧರ