Ad imageAd image

ನಟ ದರ್ಶನ್ ಗೆ ಬೇಲಾ..? ಜೈಲಾ..? : ಕೋರ್ಟ್ ನಿಂದ ಇಂದು ಮಹತ್ವದ ತೀರ್ಪು 

Bharath Vaibhav
ನಟ ದರ್ಶನ್ ಗೆ ಬೇಲಾ..? ಜೈಲಾ..? : ಕೋರ್ಟ್ ನಿಂದ ಇಂದು ಮಹತ್ವದ ತೀರ್ಪು 
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಅಂದರ್ ಆಗಿದ್ದು, ಇಂದು ನಟ ದರ್ಶನ್ ಗೆ ಬೇಲಾ..? ಜೈಲಾ..? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಕೋರ್ಟ್ ನಿಂದ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದು, ಕೋರ್ಟ್ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೋ..?

ಅಥವಾ ನ್ಯಾಯಾಂಗ ಬಂಧನಕ್ಕೆ ನೀಡಬೇಕೋ..? ಎಂಬುದನ್ನು ನಿರ್ಧರಿಸಲಿದೆ. ಹೆಚ್ಚಿನ ಪಕ್ಷ ದರ್ಶನ್ ರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ.

ಈ ಪ್ರಕರಣದಲ್ಲಿ ದರ್ಶನ್ ಗೆ ಸದ್ಯಕ್ಕೆ ಬೇಲ್ ಸಿಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ. 90 ದಿನದೊಳಗೆ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ ಅವಕಾಶವಿದ್ದು, ಅಷ್ಟರೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ದರ್ಶನ್ & ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!