Ad imageAd image

ಬೆಳಗಾವಿ: ವಿಶೇಷ ಚೇತನರ ದಿನಾಚರಣೆ

Bharath Vaibhav
ಬೆಳಗಾವಿ: ವಿಶೇಷ ಚೇತನರ ದಿನಾಚರಣೆ
WhatsApp Group Join Now
Telegram Group Join Now

ಬೆಳಗಾವಿ: ವ್ಯಕ್ತಿಯ ಸರ್ವಾಂಗೀಣ ವ್ಯಕ್ತಿತ್ವರೂಪಗೊಳ್ಳಬೇಕಾದರೆ ಕ್ರೀಡೆಯ ಪಾತ್ರ ಅನನ್ಯವಾಗಿದೆ ಎಂದು ವಿಶ್ವಾಸ್ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿ  ಬಸಪ್ಪ ಸುಣಧೋಳಿ ಅವರು ಹೇಳಿದರು.

ನಗರದ ಹಿಂದುವಾಡಿಯಲ್ಲಿ ಕ್ರಾಂತಿ ಮಹಿಳಾ ಮಂಡಲ ಹಾಗೂ ಉಮಾ ಸಂಗೀತ ಪ್ರತಿಷ್ಠಾನ  ವತಿಯಿಂದ ಕಿಲ್ಲಾದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ವಿಶ್ವಾಸ ಸಂಸ್ಥೆಯ ಬಸಪ್ಪ ಸುಣಧೋಳಿ, ಈರಪ್ಪ ಬಸಪ್ಪ ಪಟಗುಂದಿ, ಲಕ್ಷ್ಮಿ ಆರ್. ರಾಯಣ್ಣವರ್, ಲಲಿತಾ ಶಂಕರ್ ಗವಸ ಮತ್ತು ಆರಾಧನಾ ಶಾಲೆಯ ರಿಯಾ ರಮೇಶ ಗೋರಲ್, ಸುಷ್ಮಾಪಟಗುಂದಿ, ರಾಣಿ ನಾರಾಯಣ್ ದುರ್ಗಾಯಿ ಅವರನ್ನು ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.

ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ್ಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಜಕ್ಕನ್ನವರ್, ರೇಣುಕಾ ಕಾಂಬಳೆ ಪ್ರಾರ್ಥಿಸಿದರು. ಪದ್ಮ ಚೌಗುಲೆ ಹಾಗೂ ಸಪ್ನಾ ಚೌಗುಲೆ ಅತಿಥಿಗಳ ಪರಿಚಯಿಸಿದರು. ಪ್ರೇಮ ಉಪಾಧ್ಯಾ, ಡಾ. ರಾಜೇಂದ್ರ ಮಠದ್ , ಗುಡಗ್ನಟ್ಟಿ , ನೆರಳೇಕರ್, ವಿಶ್ವಾಸ್ ಫೌಂಡೇಶನದ ಸದಸ್ಯರು ನಮ್ಮ ಎರಡು ಸಂಸ್ಥೆಯ ಸದಸ್ಯರು ಮತ್ತು ಆರಾಧನಾ ಶಾಲೆಯ ಮಕ್ಕಳು ಹಾಗೂ ಶಾಲೆ ಸಿಬ್ಬಂದಿ ವರ್ಗ ದವರೆಲ್ಲರೂ ಉಪಸ್ಥಿತರಿದ್ದರು. ಶೋಭಾ ಕಾಡನ್ನವರ್ ನಿರೂಪಿಸಿದರು.‌ ರತ್ನ ಗುಡಗನಟ್ಟಿ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!