ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಲಹೊಂಗಲ ಮತಕ್ಷೇತ್ರದ ಪಟ್ಟಿಹಾಳ ಗ್ರಾಮದ ಬಸ್ ನಿಲ್ದಾಣದ ಬಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಲೋಕಸಭಾ ಚುನಾವಣೆ ಅಂಗವಾಗಿ ಪ್ರಚಾರ ಸಭೆ ನಡೆಸಿ,ಉತ್ತಮ ಆಡಳಿತ ಹಾಗೂ ದೇಶದ ಉತ್ತಮ ಅಭಿವೃದ್ಧಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ನೀಡಿದ ಕೊಡುಗೆಯ ಕುರಿತು ಮಾತನಾಡಿ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಜಗದೀಶ ಮೆಟಗುಡ್, ಮಾಜಿ ಶಾಸಕರಾದ ಡಾ. ವಿ.ಐ. ಪಾಟೀಲ್, ಪ್ರಮುಖರಾದ ಶ್ರೀ ಶಿವಾಜಿ ಗಡದವರ, ಶ್ರೀ ಎ.ಸಿ.ಕತ್ತಿ, ಶ್ರೀ ಶಂಕರ ಮಾಡಲಗಿ, ಶ್ರೀ ಮಂಜುನಾಥ ಬಸರಗಿ ಹಾಗೂ ಗ್ರಾಮದ ಗುರುಹಿರಿಯರು, ಮಾತೆಯರು , ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ