ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ನನ್ನು ಒಂದು ವಾರದಲ್ಲಿ ಕೆಲಸದಿಂದ ವಜಾ ಮಾಡದೇ ಇದ್ದರೆ ಬೃಹತ್ ಹೋರಾಟದ ಎಚ್ಚರಿಕೆ: ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ

Bharath Vaibhav
ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ನನ್ನು ಒಂದು ವಾರದಲ್ಲಿ ಕೆಲಸದಿಂದ ವಜಾ ಮಾಡದೇ ಇದ್ದರೆ ಬೃಹತ್ ಹೋರಾಟದ ಎಚ್ಚರಿಕೆ: ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ
WhatsApp Group Join Now
Telegram Group Join Now

ಬೆಳಗಾವಿ:  ನಗರದ ರಾಣಿ ಚೆನ್ನಮ್ಮ ಸರ್ಕಲ್ ದಿಂದ ಪ್ರತಿಭಟನೆ ಮೂಲಕ ಕಾರ್ಯಕರ್ತರೊಂದಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ತಹಶಿಲ್ದಾರರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೆ ವಾಟ್ಸ್ ಆಫ್ ಮೂಲಕ ಡೆತ್‌ ನೋಟ್ ಹಾಕಿ ತನ್ನ ಸಾವಿಗೆ ಸಚಿವರ ಆಪ್ತ ಸೋಮು, ತಹಶಿಲ್ದಾರ ಬಸವರಾಜ ನಾಗರಗಾಳ ಮತ್ತು ಸಹೋದ್ಯೋಗಿ ಅಶೋಕ ಕಟ್ಟಲಗಿ ಕಾರಣವಾಗಿದ್ದಾರೆ.

ತಹಶಿಲ್ದಾರಕಛೇರಿಯಲ್ಲಿ ನಡೆದಿರುವ ಕರ್ಮಕಾಂಡದ ವಿರುದ್ಧ ಒಗ್ಗಟ್ಟಾಗಿ ಹೊರಾಡಿ ಎಂದು ಸಂದೇಶ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವ್ಯವಸ್ಥೆಯಿಂದ ಬೆಸತ್ತು ಆತ್ಮಹತ್ಯೆ ಮಾಡಿಕೊಂಡ ಯುವ ನೌಕರದಾರರನ ಕುಟುಂಬಕ್ಕೆ ನ್ಯಾಯವದಿಗಿಸಬೇಕಾಗಿರುವದು ನಾಗರಿಕ ಸಮಾಜದ ಕರ್ತವ್ಯ .ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ಕಾಂಗ್ರೆಸ್ ಮುಖಂಡರು ಮೃತ ರುದ್ರೇಶ್ ಯಡವಣ್ಣವರ್ ಅವರ ಮನೆಗೆ ತೆರಳಿ ಸಾಂತ್ವನ ಹೇಳದೇ ಇರುವುದು ವಿಷಾದನೀಯ ಸಂಗತಿ ಈ ಪ್ರಕರಣದಲ್ಲಿ ಸಚಿವರ ಆಪ್ತ ಇರುವದರಿಂದ ಆತನನ್ನು ಮತ್ತು ಆಪಾದಿತದ್ವಯರನ್ನು ವಿಶೇಷ ತನಿಖಾ ತಂಡದಿಂದ ತಿವ್ರತರನಾದ
ತನಿಖೆ ನಡೆಸಿ ಅದರ ಹಿಂದಿನ ಕರ್ಮಕಾಂಡ ಮತ್ತು ಅದಕ್ಕೆ ಕಾರಣಿಕರ್ತರಾದವರನ್ನು ಪತ್ತೆ ಮಾಡಬೇಕು. ಈ ತನಿಖೆ ನಿಷಪಕ್ಷಪಾತವಾಗಿನಡೆದು ಸತ್ಯ ಹೊರ ಬರಬೇಕಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಾಜಿನಾಮೆ ಕೊಡಬೇಕು. ಮತ್ತು ಬೆಳಗಾವಿ ತಹಶಿಲ್ದಾರರಾದ ಬಸವರಾಜ ನಾಗರಾಳ ಇವರನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು. ಮತ್ತು ಲಕ್ಷ್ಮೀ ಹೆಬ್ಬಾಳ್ಳರ ಅವರು ರಾಜೀನಾಮೆ ಕೊಡದೆ ಹೊದರೆ
ತಾವುಗಳು ಸಚಿವ ಸಂಪುಟದಿಂದ ಅವರನ್ನು ವಜಾ ಮಾಡಬೇಕೆಂದು ಕೊರುತ್ತೆವೆ. ಈಗಾಗಲೆ ರಾಜ್ಯದಲ್ಲಿ ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ 8 ಜನ ಸರ್ಕಾರಿ ಅಧಿಕಾರಿಗಳನ್ನು ಬಲಿ ಪಡೆದಿದ್ದಾರೆ.

ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ನೌಕರದಾರರ ಮೇಲೆ ಒತ್ತಡ ತಂದು ಅವರ ಸಾವಿಗೆ ಕಾರಣವಾಗಿರುವ ಇಂತವರನ್ನು ಹೆಡೆಮೂರಿ ಕಟ್ಟಬೇಕಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಬಕಾರಿ ಹಗರಣ, ಸರಣಿ ಬಾಣಂತಿಯರು ಹಾಗೂ ಶಿಶುಗಳ ಸಾವು ಮತ್ತು, ಹಾಲಿನ ದರ ಏರಿಕೆ ಸರ್ಕಾರ ನೌಕರರ ಹಾಗೂ ಗುತ್ತಗೆದಾರರ ಆತ್ಮಹತ್ಯೆ ರೈತರ ಆತ್ಮಹತ್ಯೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆರಿದೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಅರಾಜಕತೆ ಸೃಷ್ಠಿಸಿ ಬ್ರಷ್ಟಾಚಾರದ ಪಾಪರ ಸರ್ಕಾರ ಇದಾಗಿದ್ದು ಇದನ್ನು ಕಿತ್ತೊಗೆಯಲು ರಾಜ್ಯದ ಜನತೆ ಸಂಕಲ್ಪತೊಟ್ಟಿದ್ದಾರೆ ಜೊತೆಗೆ ಬೆಳಗಾವಿಯ ರುದ್ರೆ ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ತಹಶೀಲ್ದಾರ ಬಸವರಾಜ ನಾಗರಾಳ ರವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


*ಬೀದರ ಜಿಲ್ಲೆಯ ಗುತ್ತಿಗೆದಾರರಾದ ಶ್ರೀ ಸಚೀನ್ ಪಾಂಚ್ಯಾಳ ಇವರು ದಿನಾಂಕ : 26/12/2024 ಇವರ
ಆತ್ಮಹತ್ಯೆ ಮಾಡಿಕೊಂಡಿರುವುದು ತುಂಬಾ ಆಘಾತಕಾರಿ ಸಂಗತಿ ಈ ಆತ್ಮಹತ್ಯೆಗೆ ಮೂಲ ಕಾರಣಿಭೂತರಾದ ಶ್ರೀ ಪ್ರೀಯಾಂಕ ಖರ್ಗೆ ಗ್ರಾಮಿಣಾಭೀವೃದ್ಧಿ ಮತ್ತು ಪಂಚಾಯತರಾಜ್ ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು. ಇವರ ಕುಮ್ಮಕ್ಕಿನಿಂದ ಅವರ ಆಪ್ತರ ಕಿರುಕುಳ ನೀಡಿದ್ದರ ಪರಿಣಾಮವಾಗಿ  ಸಚೀನ್ ಪಾಂಚ್ಯಾಳ ಮನನೊಂದು ಡೆತ್ ನೋಟಿನಲ್ಲಿ ಮಾನ್ಯ ಸಚಿವರ ಹಾಗೂ ಅವರ ಆಪ್ತರ ಹೆಸರುಗಳನ್ನು ನಮೂದಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಸದರಿ ಎಲ್ಲ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಹಾಗೂ ಸಚಿವರ ರಾಜೀನಾಮೆ ಪಡೆದುಕೊಳ್ಳುವಂತೆ ಈ ಮೂಲಕ ಒತ್ತಾಯಿಸುತ್ತೇವೆ ಹಾಗೂ ಸದರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರ ಜಿಲ್ಲೆಯಿಂದ ಒತ್ತಾಯಿಸುತೇವೆ. ಮತ್ತು ದಯಾಳುಗಳಾದ ತಾವು ಗುತ್ತಿಗೆದಾರರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಿರೆಂದು ಭಾವಿಸುತ್ತೆವೆ. ಒಂದು ವೇಳೆ ಸಚಿವರ ರಾಜೀನಾಮೆಯನ್ನು ಪಡೆಯದಿದ್ದರೆ ರಾಜ್ಯಾದ್ಯಂತ ಭಾರತೀಯ ಜನತಾ ಪಾರ್ಟಿ ಉಗ್ರ ಸ್ವರೂಪದ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಯುವರಾಜ ಜಾಧವ,ವಿಜಯ ಕೊಡಗನೂರ, ಪ್ರಶಾಂತ್ ಕಂಗ್ರಾಳಕರ್, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಬಸ್ಮೆ, ಮುರುಗೇಂದ್ರಗೌಡ ಪಾಟೀಲ,ವಿನಯ್ ಕದಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಉಮೇಶ್ ಪುರಿ, ಸುಭಾಷ್ ಸಣ್ಣವೀರಪ್ಪನವರ,ಆನಂದ ಅತ್ತುಗೋಳ,ಮನೋಜ್ ಪಾಟೀಲ್, ಧನ್ಯಕುಮಾರ ಪಾಟೀಲ್, ಪ್ರಸಾದ್ ದೇವರಮನಿ, ವಿಠ್ಠಲ ಸಾಯಣ್ಣವರ, ವೀರಭದ್ರ ಪೂಜಾರಿ ಹಾಗೂ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

 

ವರದಿ:ಪ್ರತೀಕ್ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!