ಚಿಕ್ಕೋಡಿ :– ಬೆಳಕೂಡ ಗ್ರಾಮದ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಚಿಕ್ಕೋಡಿ ಚರಮೂರ್ತಿ ಮಠದ ಪ.ಪೂಜ್ಯ.ಶ್ರೀ ಸಂಪದನಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹೈ-ಟೆಕ್ ಕಟ್ಟಡವನ್ನು ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಉದ್ಘಾಟಿಸಿ,ಚಾಲನೆ ನೀಡಿದರು.

ಬಳಿಕ ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಚವ್ಹಾಣ,ಮಾಜಿ ಅಧ್ಯಕ್ಷರಾದ ಶ್ರೀ ಬಸವಣ್ಣಿ ಕುಂಬಾರ,ಮಾಜಿ ಉಪಾಧ್ಯಕ್ಷರಾದ ಸೌ.ರೋಹಿಣಿ ಕವಣಿ,ಸೌ.ಸುನಂದಾ ಗಿರಜಿ,ಶ್ರೀ ಕಲ್ಮೇಶ ಕಿವಡ, ಶ್ರೀ ದೇವರಾಜ ಪಾಶ್ಚಪುರೆ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :-ರಾಜು ಮುಂಡೆ




