ಬೀದರ್ : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್‌ಗೆ 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಈ ವಿಚಾರವಾಗಿ ಕಾನೂನು ಸಚಿವ HK ಪಾಟೀಲ್ ಸ್ಪೋಟಕ ಆರೋಪ ಮಾಡಿದ್ದೂ, ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನು ಬಿಜೆಪಿ ದೋಷಮುಕ್ತ ಮಾಡಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿ, ಆರ್.ಅಶೋಕ್ ಸೇರಿದಂತೆ ಎಲ್ಲರೂ ಕ್ಷಮೆ ಕೇಳಬೇಕು. ಸೈಲ್‌ಗೆ ಲೂಟಿ ಮಾಡಲು ಅನುಕೂಲ ಮಾಡಿದ 23 ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದರು.
ಪ್ರಕರಣದಲ್ಲಿ ಇದ್ದವರನ್ನು ನೀವು ಕೈಬಿಟ್ಟಿದ್ದೀರಿ. ಆದರೆ, ನಾಚಿಗೆ ಪಟ್ಟುಕೊಳ್ಳದೇ ಹೇಳಿಕೆ ನೀಡಲು ಬರುತ್ತೀರಲ್ಲವೆ? ಸಮಾಜಕ್ಕೆ ಮುಖ ತೋರಿಸಲು ನಿಮಗೆ ಮುಜುಗರ ಅನಿಸೋದಿಲ್ವಾ? ಸೈಲ್‌ಗೆ ಸಹಕಾರ ನೀಡಿದ ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದಕ್ಕೆ ನೀವು ಕ್ಷಮೆ ಕೇಳಬೇಕು ಎಂದರು.
ಬೇಲೆಕೇರಿ ಅದಿರು ಪ್ರಕರಣದಲ್ಲಿ ಸತೀಶ್ ಸೈಲ್‌ಗೆ ಜೈಲು ಶಿಕ್ಷೆ ಕುರಿತು ಮಾತನಾಡಿ, ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಲೇಬೇಕು. ಅವರಿಗೆ ಶಿಕ್ಷೆಯಾಗಬೇಕು ಅಂತಾ ನಾವೇ ತನಿಖೆ ಮಾಡಿಸಿದ್ದು. ಹೀಗಾಗಿ ಇಂದು ಕೋರ್ಟ್ ಸೈಲ್‌ಗೆ ಶಿಕ್ಷೆ ನೀಡಿದ್ದು. ಲೂಟಿ ಮಾಡಿದವರಿಗೆ ಈ ಮಟ್ಟದ ಶಿಕ್ಷೆ ನೀಡಬಹುದು ಎಂದು ಕೋರ್ಟ್ ತೀರ್ಪು ನೀಡಿ ತೋರಿಸಿದೆ ಎಂದು ಸೈಲ್ ವಿರುದ್ಧವೇ ಸಚಿವರು ಆಕ್ರೋಶ ಹೊರ ಹಾಕಿದ್ದಾರೆ.