Ad imageAd image

ಬೆಳಗಾವಿ ಉದ್ಯಮಿ ಕೊಲೆ ಪ್ರಕರಣ : 13 ಹಾರ್ಡ್ ಡಿಸ್ಕ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆ 

Bharath Vaibhav
ಬೆಳಗಾವಿ ಉದ್ಯಮಿ ಕೊಲೆ ಪ್ರಕರಣ : 13 ಹಾರ್ಡ್ ಡಿಸ್ಕ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆ 
WhatsApp Group Join Now
Telegram Group Join Now

ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿಯ ಉದ್ಯಮಿ ಸಂತೋಷ್ ಪದ್ಮಣ್ಣನವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಮನೆಯಲ್ಲಿದ್ದ 13 ಹಾರ್ಡ್ ಡಿಸ್ಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ ವಶಕ್ಕೆ ಪಡೆದ ಹಾರ್ಡ್ ಡಿಸ್ಕ್ ನಲ್ಲಿ ಮಹಿಳೆಯರ ಜೊತೆಗೆ ಖಾಸಗಿ ಕ್ಷಣದ ಫೋಟೋ ಮತ್ತು ವಿಡಿಯೋ ಪತ್ತೆಯಾಗಿವೆ. ಉದ್ಯಮಿ ಸಂತೋಷ್​ ನೂರಾರು ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.

ನಂತರ ಅವುಗಳನ್ನು ಹಾರ್ಡ್​​ ಡಿಸ್ಕ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಪೊಲೀಸರು 13 ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್​​ಗಳನ್ನು ವಶಕ್ಕೆ ಪಡೆದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ಪ್ರಕರಣ ಹಿನ್ನೆಲೆ

ಅಕ್ಟೋಬರ್ 9ರಂದು ಸಂತೋಷ್ ಪದ್ಮಣ್ಣನವರ್ ಸಾವನಪ್ಪಿದ್ದಾರೆ. ಈ ವೇಳೆ ಕುಟುಂಬ ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ವೇಳೆ ಸಂತೋಷ ಪುತ್ರಿ ತನ್ನ ತಂದೆಯ ಸಾವು ಹೃದಯಘಾತದಿಂದ ವಾಗಿಲ್ಲ ಎಂದು ಅನುಮಾನ ವ್ಯಕ್ತಪಡಿಸಿ,ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ತಾಯಿ ಉಮಾ ವಿರುದ್ಧ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್ ಪತ್ನಿ ಉಮಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ.

ಹಾರ್ಡ್ ಡಿಸ್ಕ್​ನಲ್ಲಿರುವ ಅಶ್ಲೀಲ ವಿಡಿಯೋಗಳ ಬಗ್ಗೆಯೂ ಮಾಹಿತಿ ನೀಡಿದ್ದಾಳೆ. ಜೊತೆಗೆ, ಪತಿ ಸಂತೋಷ ಪದ್ಮಣ್ಣನ್ನವರ ಮಕ್ಕಳ ಎದುರು ಬೆತ್ತಲಾಗಿ ಓಡಾಡುತ್ತಿದ್ದರು ಅಂತ ಪೊಲೀಸರ ಮುಂದೆ ಹೇಳಿದ್ದಾಳೆ. ಈ ವಿಡಿಯೋಗಳನ್ನು ಕೂಡ ಉಮಾ ಪೊಲೀಸರಿಗೆ ನೀಡಿದ್ದಾಳೆ. ಇದೀಗ ಪೊಲೀಸರು ಹಾರ್ಡ್ ಡಿಸ್ಕ್ ನಲ್ಲಿ ಇರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಶಾಕ್ ಆಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!