ಬೆಳಗಾವಿ:- ಕೇಂದ್ರದ 2024-25 ರ ಬಜೆಟ್ ನಲ್ಲಿ ಬಡಜನರು, ಮಹಿಳೆಯರು, ಯುವಜನತೆ ಹಾಗೂ ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪುಷ್ಠಿ ನೀಡಿದಂತಾಗಿದೆ.
ಪ್ರಧಾನಿ ಮೋದಿಯವರ ಕನಸಿನ ವಿಕಸಿತ ಭಾರತದಡಿ ದೇಶದ ಪ್ರತಿಯೊಬ್ಬ ನಾಗರಿಕನು ಸಹ ಆರ್ಥಿಕವಾಗಿ ಅಭಿವೃದ್ಧಿ ಹೊಂದುವನು. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧ್ಯೇಯದಂತೆ ಯಾರೊಬ್ಬರೂ ಹಿಂದೆ ಉಳಿಯುವುದಿಲ್ಲ.
ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಯಿಂದ ಇದು ಉತ್ತಮ ಬಜೆಟ್ ಆಗಿದ್ದು, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ, ಸ್ಟಾರ್ಟ್ ಅಪ್ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ 4 ಅಂಶಗಳು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.ಈ ಎಲ್ಲ ಅಂಶಗಳ ಕುರಿತು ಇಂದಿನ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಂಡು,ಮಾತನಾಡಿದ ಕ್ಷಣ.
ವರದಿ :-ಪ್ರತೀಕ ಚಿಟಗಿ