Ad imageAd image

ಬೆಳಗಾವಿಯ ಅಧಿವೇಶನವೇ ಸಿಎಂಗೆ ಕೊನೆಯ ಅಧಿವೇಶನ : ಬಿ.ವೈ.ವಿಜಯೇಂದ್ರ

Bharath Vaibhav
ಬೆಳಗಾವಿಯ ಅಧಿವೇಶನವೇ ಸಿಎಂಗೆ ಕೊನೆಯ ಅಧಿವೇಶನ : ಬಿ.ವೈ.ವಿಜಯೇಂದ್ರ
BY VIJENDRA
WhatsApp Group Join Now
Telegram Group Join Now

ಬೆಳಗಾವಿ : ಮುಡಾ ಹಗರಣದಲ್ಲಿ ಸಿಲುಕಿ ಇಷ್ಟುದಿನ ತಾವು ಭ್ರಷ್ಟರಲ್ಲ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಕುಟುಂಬವು ಮುಡಾ ಹಗರಣದ ಸುಳಿಯಲ್ಲಿ ಸಿಕ್ಕಿಕೊಂಡಿದೆ.

ಹೀಗಾಗಿ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನವೇ ಸಿಎಂಗೆ ಕೊನೆಯ ಅಧಿವೇಶನವಾಗಲಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದಾರೆ. ಹೀಗಿದ್ದರೂ ಹಠ ಹಿಡಿದು ಕುಳಿತಿರುವ ಅವರು ರಾಜೀನಾಮೆ ನೀಡುತ್ತಿಲ್ಲ.

ಈ ಅಧಿವೇಶನದ ಬಳಿ ಅವರು ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಸಿಎಂ ಸ್ಥಾನವನ್ನು ಈಗಾಗಲೇ ಕಾಂಗ್ರೆಸ್ ಹರಾಜಿಗೆ ಇಟ್ಟಿದೆ. ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಕಳೆದುಕೊಳ್ಳುವ ದಿನಗಳು ಸಮೀಪವಾಗಿವೆ ಎಂದು ಜರಿದರು.

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಅವರ ಇಡೀ ಕುಟುಂಬವೇ ಮುಳುಗಿದೆ. ಅವರು ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಆದರೆ ಅದು ಆಗಿಲ್ಲ ಎಂದರು. ಈ ಮೊದಲು ಚಳಿಗಾಲದ ಅಧಿವೇಶನಕ್ಕೆ ಹೊಸ ಸಿಎಂ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!