ಸಿಂಧನೂರು : ತ್ಯಾಗಮಯಿ ಮಾತೆ ರಾಮಬಾಯಿ ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನಾಚರಣೆ ಅಂಗವಾಗಿ ದಿನಾಂಕ 25-3-2026 ಬುಧವಾರ ರಂದು ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಪದಾಧಿಕಾರಿಗಳ ಶಿಬಿರ ಹಮ್ಮಿಕೊಂಡಿದೆ ಎಂದು ಡಿ ಎಸ್ ಎಸ್ ರಾಯಚೂರು ಜಿಲ್ಲಾ ಸಂಚಾಲಕ ಮರಿಯಪ್ಪ ಸಿಂಧನೂರು ಮಾಧ್ಯಮದ ಮೂಲಕ ತಿಳಿಸಿದರು ತ್ಯಾಗಮಯಿ ರಾಮಬಾಯಿ ಅಂಬೇಡ್ಕರ್, ಬಾಬಾ ಸಾಹೇಬರ ಎಲ್ಲಾ ಹೋರಾಟಗಳಿಗೆ ಸದಾ ಬೆನ್ನೆಲುಬಾಗಿ ನಿಂತ ಮಾತೆ ರಮಾಬಾಯಿ ಅವರಿಗೆ ಸಲ್ಲಬೇಕು, ಮತ್ತು ಭಾರತದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಪುಲೆ ರವರ ವಿಚಾರಗಳನ್ನು ಅವರ ಆದರ್ಶಗಳು ಇವತ್ತಿನ ಯುವ ಪೀಳಿಗೆಗಳಿಗೆ ತಿಳಿಸಿ ಜಾಗ್ರತಿ ಮೂಡಿಸುವ ಸಲುವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಸ್ವಾಭಿಮಾನಿ ಬಿ,ಕೃಷ್ಣಪ್ಪ ಬಣ ಜಿಲ್ಲಾ ಸಮಿತಿ ಜಿಲ್ಲಾಮಟ್ಟದ ಬೃಹತ್ ಮಹಿಳಾ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸುವ ಮೂಲಕ ಮಾತೆ ರಮಾಬಾಯಿಯವರಿಗೆ ಮತ್ತು ಸಾವಿತ್ರಿಬಾಯಿ ಪುಲೆ ರವರಿಗೆ ಗೌರವ ನಮನ ಸಲ್ಲಿಸೋಣ ಎಂದರು.
ವರದಿ : ಬಸವರಾಜ ಬುಕ್ಕನಹಟ್ಟಿ.




