ಹೆಡ್ಡಿಂಗ್ಲೆ (ಲೀಡ್ಸ್): ಭಾರತ ವಿರುದ್ಧ ನಿನ್ನೆ ಇಲ್ಲಿ ಮುಗಿದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಐದು ವಿಕೆಟ್ ಗಳಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿದೆ.
ನಿನ್ನೆ ಕಡೆಯ ಹಾಗೂ ಐದನೇ ದಿನ ಗೆಲ್ಲಲು 371 ರನ್ ಗಳನ್ನು ಗಳಿಸಬೇಕಿದ್ದ ಇಂಗ್ಲೆಂಡ್ ಐದು ವಿಕೆಟ್ ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು. ಇಂಗ್ಲೆಂಡ್ ಪರ ಬೆನ್ ಡಕೆಟ್ 149 ರನ್ ಗಳಿಸಿ ತಂಡದ ಜಯಕ್ಕೆ ಪ್ರಮುಖ ಕಾರಣರಾದರು. ಜೂ ರೂಟ್ 53 ರನ್ ಗಳಿಸಿದರು.