ತುರುವೇಕೆರೆ: ತುರುವೇಕೆರೆ ಉಪವಿಭಾಗದ ತಂಡಗ ಶಾಖಾ ವ್ಯಾಪ್ತಿಯಲ್ಲಿನ ತಂಡಗ 110/11 ಕೆ.ವಿ. ಉಪಸ್ಥಾವರದಲ್ಲಿ ತುರ್ತಾಗಿ ಹೊಸ ಲಿಂಕ್ ಲೈನ್ ಕಾಮಗಾರಿ ಇರುವುದರಿಂದ 2026 ರ ಫೆಬ್ರವರಿ 24 ರಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ತಂಡಗ ಉಪಸ್ಥಾವರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಪೂರಕಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಐಪಿ ಪೂರಕಗಳ ಸಮಯದಲ್ಲಿ ಬದಲಾವಣೆ ಮಾಡಿ ಬೆಳಗಿನ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಲಿಂಕ್ ಲೈನ್ ಕಾಮಗಾರಿ ಮುಗಿದ ನಂತರ ಯಾವುದೇ ಸಮಯದಲ್ಲಿ ವಿದ್ಯುತ್ ನೀಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.
ವರದಿ: ಗಿರೀಶ್ ಕೆ ಭಟ್




