ಮೊಳಕಾಲ್ಮುರು: ಪಟ್ಟಣದ ಬೆಸ್ಕಾಂ ಇಲಾಖೆ ಆವರಣದಲ್ಲಿ ಗುರುವಾರದಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬೆಸ್ಕಾಂ ಉಪ ವಿಭಾಗ ಕಚೇರಿ ಹಾಗೂ ಶಾಖಾ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ,ಅನೇಕ ದಶಕಗಳಿಂದಲೂ ಸೂಕ್ತವಾದ ಕಚೇರಿ ಹಾಗೂ ಕಟ್ಟಡಗಳ ಕೊರತೆಯಿಂದ ಬಳಲುತ್ತಿದ್ದ ಬೆಸ್ಕಾಂ ಇಲಾಖೆಗೆ 2.88 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಕಾಮಗಾರಿಯನ್ನು ಗುತ್ತಿಗೆದಾರರು ವರ್ಷದೊಳಗೆ ಪೂರೈಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಪ್ರಸ್ತುತವಾಗಿರುವ ಹಳೇ ಕಟ್ಟಡವನ್ನು ತೆರವುಗೊಳಿಸಿ ಇದೇ ಸ್ಥಳದಲ್ಲಿ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣ ಮಾಡಲಾಗುವುದು. ಇದರಲ್ಲಿ ವಸತಿಗೃಹಗಳು ಒಳಗೊಂಡಿರುತ್ತವೆ.ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಟಿ.ಜಗದೀಶ್, ಹಿರಿಯೂರು ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸುತಾರ್, ಎಇಇಗಳಾದ ಎಂ.ಎಸ್.ರಾಜು, ಅರ್ಜುನ್(ಸಿವಿಲ್), ಎಸ್‌ಒಗಳಾದ ಚಂದಕಾಂತ್, ಅಭೀಬುಲ್ಲಾ, ಕಿರಣ್ ಕುಮಾರ್, ರಾಜೇಶ್, ತಾಪಂ ವ್ಯವಸ್ಥಾಪಕ ನಂದೀಶ್, ಪಿಡಬ್ಲ್ಯೂಡಿ ಎಇಇ ಲಕ್ಷಿನಾರಾಯಣ ಸೇರಿದಂತೆ ಹಲವರಿದ್ದರು.