ಚನ್ನಮ್ಮನ ಕಿತ್ತೂರು – ಕಿತ್ತೂರಿನ ಕಾಲೇಜು ಕಾಂಪ್ಲೆಕ್ಸ್ ಟಾಕೀಸ್ ಎದುರಿಗೆ ಬೇಸಿಗೆ ಶಿಬಿರ ಯುನೀಕ್ ಕ್ಲಾಸ್ ಪ್ರಾರಂಭವಾಗಿದೆ ಪಾಲಕರೇ ನಿಮ್ಮ ಮಕ್ಕಳಿಗೆ ಉತ್ತಮ ಅವಕಾಶ ಇದು ಈ ಯುನೀಕ್ ಕ್ಲಾಸ್ ನಲ್ಲಿ
6ರಿಂದ 12ವರ್ಷ
ಸ್ಪೋಕನ್ ಇಂಗ್ಲಿಷ್ 5 ರಿಂದ ಪದವಿ
ಟ್ಯೂಷನ್ 5ನೇ ಅಥವಾ 10 ನೇ ತರಗತಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕ ವೃಂದವರಿಂದ ಬೋಧನೆ ಮಾಡಲಾಗುವುದು
ಈ ಯುನೀಕ್ ಕ್ಲಾಸ್ ನಲ್ಲಿ ಮಕ್ಕಳಿಗೆ ಮನದಟ್ಟಾಗುವಂತೆ ಬೋಧಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಅವರನ್ನು ಉತ್ತಮ ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ ಈ ಯುನೀಕ್ ಕ್ಲಾಸ್ ಪ್ರಾರಂಭ ಮಾಡಲಾಗಿದೆ.
ಈ ಯುನೀಕ್ ಕ್ಲಾಸ್ ನಲ್ಲಿ ಪ್ರವೇಶ ಪಡೆಯಲು ಕೊಡಲೇ ಸಂಪರ್ಕಿಸಿ 9480380267, 8147109259
ಇನ್ನೇನು ಬೇಸಿಗೆ ರಜೆ ಆರಂಭವಾಯಿತು. ರಜೆ ಅವಧಿಯನ್ನು ಮಕ್ಕಳು ಇಡೀ ದಿನ ಗೆಳೆಯರ ಜತೆ ಆಟವಾಡುತ್ತಲೋ, ಟಿವಿ, ಕಂಪ್ಯೂಟರ್ ಮುಂದೆ ಕೂತು ಸಿನಿಮಾ ನೋಡುತ್ತಲೋ ಕಳೆಯಬೇಕೇ? ಬೇಸಿಗೆ ಶಿಬಿರಗಳಿಗೆ ಕಳುಹಿಸಿದರೆ ಪ್ರಯೋಜನ ಇದೆಯೇ? ಇಲ್ಲಿದೆ ಒಂದಷ್ಟು ವಿವರ.
ದೈಹಿಕ ಚಟುವಟಿಕೆ
ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಶಿಬಿರಗಳಲ್ಲಿ ಆಟ, ಓಟ, ಟ್ರಕ್ಕಿಂಗ್ ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತದೆ. ಇವು ಮಕ್ಕಳ ಮೈ, ಮನಸ್ಸನ್ನು ಚುರುಕುಗೊಳಿಸುತ್ತದೆ.
ಆತ್ಮವಿಶ್ವಾಸ
ಹೆಚ್ಚಿನ ಮಕ್ಕಳು ನಾನಾ ಕಾರಣಗಳಿಂದಾಗಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುತ್ತಾರೆ. ಇಂಥ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅನುಕೂಲ ಮಾಡಿಕೊಡುತ್ತವೆ. ಶಿಬಿರದಲ್ಲಿ ಸಿಗುವ ಮುಕ್ತ ವಾತಾವರಣ ಅವರಲ್ಲಿನ ಭಯ ಹೋಗಲಾಡಿಸುತ್ತದೆ. ಹೊಸ ಉತ್ಸಾಹ, ಚೈತನ್ಯ ತುಂಬುತ್ತದೆ.
ಟಿವಿಯಿಂದ ದೂರ
ಈಗಿನ ಮಕ್ಕಳು ದಿನದ ಬಹುತೇಕ ಅವಧಿಯನ್ನು ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್ಗಳ ಎದುರೇ ಕಳೆಯುತ್ತಾರೆ. ಇದರಿಂದ ಅವರು ಎಲ್ಲರ ಜತೆಗಿದ್ದರೂ ಏಕಾಂಗಿಯಾಗಿ ಬಿಟ್ಟಿರುತ್ತಾರೆ. ಸುಲಭವಾಗಿ ಗೀಳು ರೋಗಕ್ಕೆ ತುತ್ತಾಗುತ್ತಾರೆ. ಆದರೆ, ಬೇಸಿಗೆ ಶಿಬಿರಗಳು ಮಕ್ಕಳು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆವಂತೆ ಮಾಡುತ್ತವೆ.
ಪ್ರತಿಭೆಗೆ ವೇದಿಕೆ
ಮಕ್ಕಳಲ್ಲಿರುವ ಪ್ರತಿಭೆಗೂ ಈ ಶಿಬಿರಗಳಲ್ಲಿ ವೇದಿಕೆ ಸಿಗುತ್ತದೆ. ಕೆಲವು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರಬಹುದು, ಶಾಲೆಯಲ್ಲಿ ಅದಕ್ಕೆ ಸೂಕ್ತ ವೇದಿಕೆ ಸಿಗದೇ ಹೋಗಿರಬಹುದು. ಅಥವಾ ಕೆಲ ಮಕ್ಕಳಿಗೆ ತಮ್ಮಲ್ಲಿ ಇಂಥದ್ದೊಂದು ವಿಶೇಷವಾದ ಪ್ರತಿಭೆ ಇದೆ ಎಂದು ತಿಳಿಯದೇ ಇರಬಹುದು. ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಕಲಾವಿದ, ವಿಶೇಷ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸಿಕೊಡುತ್ತವೆ.




