Ad imageAd image

ಮಳೆಗಾದಲ್ಲಿ ಆರೋಗ್ಯಕರ ಆಹಾರದ ಸಲಹೆಗಳು

Bharath Vaibhav
WhatsApp Group Join Now
Telegram Group Join Now

ನಾಲ್ಕು ತಿಂಗಳಗಳ ಕಾಲ ಬಿರುಬಿಸಿಲಿನಿಂದ ಈಗ ವಾತಾವರಣ ಮಳೆಗಾಲಕ್ಕೆ ತಿರುಗಿದೆ. ಇದು ಮನುಷ್ಯನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಕಷ್ಟು ಆರೋಗ್ಯದ ಸಮಸ್ಯೆಗಳು ಎದುರಾಗುವುದು ಸಹಜ. ಈ ಕಾಲದಲ್ಲಿ ಆಹಾರ ಪದ್ಧತಿ ಮೇಲೆ ಸಾಕಷ್ಟು ನಿಗಾ ಹೊಂದಿರಬೇಕು. ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಯಾವುದೇ ಸಮಸ್ಯೆ ಮಾಡದಂತ ಆಹಾರ ಸೇವಿಸಬೇಕು. ಈ ಆಹಾರ ಪದ್ದತಿಗಳ ಬಗ್ಗೆ ವೈದ್ಯರ ಕೆಲವು ಸಲಹೆ ಇಲ್ಲಿದೆ.

ಮಳೆಗಾಲದಲ್ಲಿ ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಸೀಸನಲ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮತ್ತು ಫೈಬರ್, ಆಂಟಿ ಆಕ್ಸಿಡೆಂಟ್‌ಗಳನ್ನು ಅಧಿಕವಾಗಿ ಹೊಂದಿವೆ. ಜಾಮೂನ್‌ ಸಹ ದೇಹಕ್ಕೆ ಒಳ್ಳೆಯದು. ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಮೀತವಾಗಿ ಬಳಸಿ. ಈ ಹಣ್ಣುಗಳ ತಾಜಾ ಜ್ಯೂಸ್‌ ಮನೆಯಲ್ಲೇ ತಯಾರಿಸಿ ಸೇವಿಸುವುದು ಒಳ್ಳೆಯದು.

ಮಳೆಗಾಲದಲ್ಲಿ ಚಳಿ ಹೆಚ್ಚಿರುವ ಕಾರಣ ದೇಹ ಬೆಚ್ಚಗಿನ ಆಹಾರ ಸೇವಿಸುವ ಬಯಕೆಯಾಗುತ್ತದೆ. ಬಜ್ಜಿ, ಬೋಂಡಾದಂಥ ಎಣ್ಣೆಯುಕ್ತ ಪದಾರ್ಥ ತಿನ್ನುವ ಬದಲು ಸೂಪ್, ಮಸಾಲಾ ಚಹಾ, ಹಸಿರು ಚಹಾ, ರಸಂ, ದಾಲ್, ಕಷಾಯಗಳನ್ನು ಸೇವಿಸುವುದು ಉತ್ತಮ. ಇಂತಹ ಆಹಾರ ಸೇವನೆ ಮಳೆಗಾಲದ ತನ್ನನೆಯ ಸಮಯದಲ್ಲಿ ಒಳ್ಳೆಯದು. ಇದರಿಂದ ಶೀತ, ಶ್ವಾಸಕೋಶದ ಸಮಸ್ಯೆ ಕಡಿಮೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಯಾಗುತ್ತದೆ.

ಮಳೆಗಾಲದಲ್ಲಿ ಸೋರೆಕಾಯಿ ಸೀಸನ್ ಇರುವ ಕಾರಣ, ಸೋರೆಕಾಯಿಂದ ತಯಾರಿಸಿದ ಆಹಾರ ಪದಾರ್ಥ ಸೇವಿಸುವುದು ಉತ್ತಮ. ಕುಂಬಳಕಾಯಿಗಳು, ಸೀಬೆಕಾಯಿಗಳು ಇತ್ಯಾದಿಗಳನ್ನು ಬಳಸಿ. ಹಸಿ ತರಕಾರಿಗಳು ಸಕ್ರಿಯ ಬ್ಯಾಕ್ಟೀರಿಯಾ ಒಳಗೊಂಡಿರುವುದರಿಂದ, ಬದಲಿಗೆ ಬೇಯಿಸಿದ ಸಲಾಡ್‌ಗಳನ್ನು ಸೇವಿಸಿ.

ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ತರಕಾರಿಗಳಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಿ. ಇವು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ತಯಾರಿಕೆಗೆ ಸಹಾಯಕ. ರೋಗವನ್ನುಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧದ ಹೋರಾಟಲು ಸಹಕಾರಿಯಾಗಿವೆ.

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಹೆಚ್ಚು ಪ್ರೋಟಿನ್‌ ಇರುತ್ತದೆ. ಬೆಣ್ಣೆ, ತುಪ್ಪ, ಇತರೆ ಪದಾರ್ಥಗಳನ್ನು ಸೇವಿಸಬಹುದು. ಪ್ರೋಟಿನ್‌ ಮೂಲವಾದ ಬೇಳೆಕಾಳು, ಚೋಲೆ, ರಾಜ್ಮಾ, ಸೋಯಾ, ಮೊಟ್ಟೆ ಮತ್ತು ಚಿಕನ್‌ ಇಂತಹ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಹಸಿರು ಮೆಣಸಿನಕಾಳು ಮಳೆಗಾಲದಲ್ಲಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಇದರಲ್ಲಿ ಪೈಪರಿನ್ ಎಂಬ ಆಲ್ಕಲಾಯ್ಡ್ ಇದ್ದು, ಹೆಚ್ಚಿನ ಮಟ್ಟದ ವಿಟಮಿನ್ ಸಿ ಮತ್ತು ಕೆ ಒಳಗೊಂಡಿದ್ದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಅಜೀರ್ಣ, ಗ್ಯಾಸ್ಟಿಕ್‌ನಂಥ ಸಮಸ್ಯೆಗಳನ್ನು ನಿವಾರಿಸಲಿದೆ.

ಶುಂಠಿ ಚಹಾವು ಗಂಟಲಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಹೊರತಾಗಿ, ಶುಂಠಿ ಮತ್ತು ಬೆಳ್ಳುಳ್ಳಿ ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ಶೀತ ಮತ್ತು ಜ್ವರ ನಿವಾರಿಸಲು ಸಹಾಯಕ. ಆದರೆ ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ, ಪುಡಿಮಾಡಿದ ಶುಂಠಿ ಅಥವಾ ಅದರ ಸಾರವನ್ನು ಜೇನುತುಪ್ಪದೊಂದಿಗೆ ಬೆರೆಸಬಹುದು.

ಎಲ್ಲ ಕಾಲದಲ್ಲು ಖರ್ಜೂರ, ಬಾದಾಮಿ, ವಾಲ್‌ನಟ್ಸ್ ಮತ್ತು ಗೋಡಂಬಿಗಳನ್ನು ತಿನ್ನುವುದು ಪ್ರಯೋಜನಕಾರಿಯೆ. ಡ್ರೈ ಫ್ರೂಟ್ಸ್‌ ನಿಮ್ಮನ್ನು ಆರೋಗ್ಯವಾಗಿಡುವ ಜೊತೆಗೆ ಜಂಕ್‌ಫುಡ್‌ ತಿನ್ನುವುದನ್ನು ತಪ್ಪಿಸಲಿದೆ.

ಮಳೆಗಾಲದಲ್ಲಿ ಆಹಾರ ಮತ್ತು ನೀರಿನ ಮೂಲಕ ಸೋಂಕಿನ ಅಪಾಯ ಹೆಚ್ಚು. ಅಧೀಕ ರೋಗನಿರೋಧಕ ಶಕ್ತಿಯು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಸೀಗಡಿ, ವಾಲ್‌ನಟ್ಸ್, ಮೀನು, ಸಿಂಪಿ, ಪಿಸ್ತಾ, ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ಇತರ ಬೀಜಗಳು ಮತ್ತು ಎಣ್ಣೆಕಾಳುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.

ಅರಿಶಿನವು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಜಠರ ಕರುಳಿನ ಹುಣ್ಣುಗಳು ಹಾಗೂ ಸೂಕ್ಷ್ಮಜೀವಿಯ ಬೆಳವಣಿಗೆಯನ್ನು ತಡೆಯುತ್ತದೆ. ಇದು ಮಲೇರಿಯಾ ವಿರೋಧಿ, ರಕ್ಷಣಾತ್ಮಕ ಮತ್ತು ತಡೆಗಟ್ಟುವ ಗುಣ ಹೊಂದಿದೆ. ಒಂದು ಟೀಸ್ಪೂನ್ ಅರಿಶಿನ ಹಾಲು/ಲಟ್ಟೆ, ಜೇನುತುಪ್ಪ ಅಥವಾ ಬಿಸಿನೀರಿನೊಂದಿಗೆ ಸೇವಿಸುವುದು ಉತ್ತಮ ಮಾರ್ಗವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!