ಹುಬ್ಬಳ್ಳಿ: ಹೆಗ್ಗೇರಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹುಬ್ಬಳ್ಳಿ (ಗ್ರಾಮೀಣ) ವತಿಯಿಂದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಜೆ.ಎಸ್.ಎಸ್. ಸಕ್ತಿ ಕಾನೂನು ವಿದ್ಯಾಲಯ ಮತ್ತು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ವಾಣಿಜ್ಯ ಕಾಲೇಜು ಹೆಗ್ಗೇರಿಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ “ಬೇಟಿ ಬಚಾವೊ ಬೇಟಿ ಪಡಾವೋ” ಅಭಿಯಾನವನ್ನು ಪಥಸಂಚಲನ ಮಾಡಿ ನಚಿತರ ದೀಪ ಬೆಳಗಿಸಿ, ಕೇಕ್ ಕಟ್ ಮಾಡಿ ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಶ್ರೀಯುತ ನಾಗೇಶ ನಾಯಕ ಪ್ರಿನ್ಸಿಪಲ್ ಸಿವಿಲ್ ಜಡ್ಡ ಮತ್ತು ಮೆಂಬರ್ ಸೆಕ್ರೆಟರಿ ತಾಲೂಕು ಸೇವೆಗಳ ಪ್ರಾಧಿಕಾರ, ಕಾನೂನು ಲಿಗಲ್ ಸರ್ವಿಸ್ ಹುಬ್ಬಳ್ಳಿ ಇವರು ಚಾಲನೆ ನೀಡಿದರು. ಅಲ್ಲದೆ ಹೆಣ್ಣುಮಕ್ಕಳ ಲಿಂಗ ತಾರತಮ್ಯದಿಂದ ಸಮಾಜದಲ್ಲಾಗುವ ದುಷ್ಪರಿಣಾಮಗಳ ಕುರಿತು ವಿವರಿಸುತ್ತಾ ಅಭಿಯಾನದ ಮಹತ್ವವು ಸಮಾಜದ ಎಲ್ಲರಿಗೂ ತಲುಪುವಲ್ಲಿ ಇಲಾಖೆಯೊಂದಿಗೆ ಪ್ರತಿಯಬ್ಬರೂ ಕೈಜೊಡಿಸಬೇಕೆಂದು ತಿಳಿಸಿದರು. ಶಿಶು ಅಭಿವೃದ್ಧಿ ಹುಬ್ಬಳ್ಳಿ (ಗ್ರಾಮೀಣ) ಯೋಜನಾಧಿಕಾರಿಗಳಾದ ಶ್ರೀಮತಿ. ಅತೀಕಾ ಎಂ ಸಿದ್ದಿ ಇವರು ಅಭಿಯಾನದ ಮಹತ್ವದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಕುರ್ತಕೋಟಿ, ಸಹಾಯಕ ನಿರ್ದೇಶಕರು, ಪಂ.ರಾಜ್ಯ ಹುಬ್ಬಳ್ಳಿ ಇವರು ಆಗಮಿಸಿದ್ದು, ಶ್ರೀಮತಿ ಸವಿತಾ ಪಾಟೀಲ, ವಕೀಲರ ಸಂಘ ಹುಬ್ಬಳ್ಳಿ. ಇವರು ಪೋಕೋ ಕಾಯ್ದೆ, ಶ್ರೀ. ಕರಿಯಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಇವರು ಬಾಲ್ಯ ವಿವಾಹ ಕುರಿತು ಹಾಗೂ ಶ್ರೀಮತಿ ರೇಖಾ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ, ಹುಬ್ಬಳ್ಳಿ ಇವರು ಪಿ,ಸಿ,ಪಿ.ಎನ್.ಡಿ.ಟಿ ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಕಾನೂನುಗಳ ಕುರಿತು ಮಾಹಿತಿಯನ್ನು ನೀಡಿದರು. ಶ್ರೀಮತಿ. ಮಂಜುಳಾ ಪಾಟೀಲ, ಹಿರಿಯ ಮೇಲ್ವಿಚಾರಕಿಯರು ಇವರು ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ವಚನ ಸ್ವೀಕಾರ ಮೂಲಕ ಅಭಿಯಾನಕ್ಕೆ ಕೈಜೋಡಿಸುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಶ್ರೀಮತಿ ಶೈಲಜಾ ಅರಕೇರಿ ಹಿರಿಯ ಮೇಲ್ವಿಚಾರಕಿಯರು ಇವರು ಕಾರ್ಯಕ್ರಮದ ನಿರೂಪಣೆ ಕೈಗೊಂಡಿದ್ದು, ಶ್ರೀಮತಿ. ದಾಕ್ಷಾಯಣಿ ಬಿಂಗೆ ಮೇಲ್ವಿಚಾರಕಿಯರು ಸ್ವಾಗತಿಸಿದರು. ಇಲಾಖೆಯ ಯೋಜನೆಗಳ ಕುರಿತು ಶ್ರೀಮತಿ. ಶೋಭಾ ಹಿರೇಮಠ, ಶ್ರೀಮತಿ. ರಾಜೇಶ್ವರಿ ಕಂಬಾರ, ಮೇಲ್ವಿಚಾರಕಿಯರು ತಿಳಿಸಿದರು. ಕಾಲೇಜಿನ ಪ್ರೊ. ಶ್ರೀ ಸಾಜೀದ ಹುಸೇನ ಎನ್. ವಂದನಾರ್ಪಣೆ ಮಾಡಿದರು.
ವರದಿ ನಿತೀಶಗೌಡ ತಡಸ ಪಾಟೀಲ್