Ad imageAd image

ಭಗತ್ ಸಿಂಗ್ ರ ಹುತಾತ್ಮ ದಿನಾಚರಣೆ : ಆರ್. ಮಾನಸಯ್ಯ

Bharath Vaibhav
ಭಗತ್ ಸಿಂಗ್ ರ ಹುತಾತ್ಮ ದಿನಾಚರಣೆ : ಆರ್. ಮಾನಸಯ್ಯ
WhatsApp Group Join Now
Telegram Group Join Now

ಸಿಂಧನೂರು: ಮಾರ್ಚ್ 23 ಸಿಪಿಐಎಂಎಲ್ ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಸಿಂಧನೂರು ನಗರದ ಸರ್ಕಿಟ್ ಹೌಸ್ ನಲ್ಲಿ ಸಭೆ ಸೇರಿ ಷಹಿದ್ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗಿತ್ತು.

ಈ ಸಂದರ್ಭದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್ ಪಾಲಿಟಿ ಬ್ಯೂರೋ ಸದಸ್ಯರಾದ ಕಾಮ್ರೇಡ್ ಆರ್. ಮಾನಸಯ್ಯ ಅವರು ಮಾತನಾಡಿ ನಾವು ಇಂಡಿಯಾ ರಾಷ್ಟ್ರವಾಗಲೂ ಬಿಡುವುದಿಲ್ಲ ಕ್ರಾಂತಿಕಾರಿ ವಿಮೋಚನ ಚಳುವಳಿಯಲ್ಲಿ ಭಗತ್ ಸಿಂಗ್ ರ ಕನಸಿನ ಭಾರತ ಕಟ್ಟೋಣ ಮಾರ್ಕ್ಸ್ ವಾದಿ ಕ್ರಾಂತಿಕಾರಿ ಚಳುವಳಿ ಮೂಲಕ ಈ ದೇಶವನ್ನು ಬದಲಾಯಿಸಬೇಕೆಂದು ಕನಸು ಕಂಡವರು ಸಿಂಗ್ ದುಡಿಯುವ ವರ್ಗದ ಜನರ ವಿಮೋಚನೆಗಾಗಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದೊಂದಿಗೆ ಶ್ರಮಶಕ್ತಿ ಭಾರತವನ್ನು ಕಟ್ಟಲಿಕ್ಕೆ ತಮ್ಮ ಪ್ರಾಣಾರ್ಪಣೆ ಮಾಡಿದವರು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಪ್ರಪಂಚದ ಇಡೀ ಕಾರ್ಮಿಕ ವರ್ಗದ ಪರ ಮೊಳಗಿಸಿದವರು ಭಗತ್ ಸಿಂಗ್ ಅವರು ಎಂದರು,

ಈ ಸಂದರ್ಭದಲ್ಲಿ , ಆರ್ ಮಾನಸಯ್ಯ. ಎಂ. ಗಂಗಾಧರ್. ಜಿ. ಅಮರೇಶ್. ತಿಪ್ಪರಾಜ್. ಶಾಂತಕುಮಾರ್ ಗಿರಿಲಿಂಗ ಸ್ವಾಮಿ. ರುಕ್ಮಿಣಿ ಗಂಗಮ್ಮ. ಹನುಮಂತ ಗೊಂಡಿಹಾಳ. ಹುಲುಗಪ್ಪ ಬಳ್ಳಾರಿ ಬಸವರಾಜ್. ರಮೇಶ್. ದರಗಯ್ಯ. ತುಳಸಮ್ಮ. ಸಂಗಪ್ಪ ಮಹಾರಾಜ್. ಮೈಲಾರಪ್ಪ ಸೇರಿದಂತೆ ಇನ್ನು ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!