ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಗಣೇಶನ ಬಳಿ ಇಟ್ಟಿದ್ದ ಭಗವಾ ಧ್ವಜವನ್ನು ಚಿತ್ರದುರ್ಗದಲ್ಲಿ ಹರಾಜು ಹಾಕಲಾಗಿದ್ದು,ಬರೋಬ್ಬರಿ 6 ಲಕ್ಷ ರೂಪಾಯಿಗೆ ಭಗವಾ ಧ್ವಜ ಹರಾಜಾಗಿದೆ.
ಮಧುಗಿರಿ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹರಾಜಲ್ಲಿ 6 ಲಕ್ಷ ರೂಪಾಯಿಗೆ ಈ ಭಗವಾಧ್ವಜವನ್ನು ಖರೀದಿಸಿದ್ದಾರೆ.
ಆಂಧ್ರಪ್ರದೇಶ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಹರಾಜು ಹಾಕುವಂತೆ, ಅದೇ ಮಾದರಿಯಲ್ಲಿ ಈ ಹರಾಜು ನಡೆಸಲಾಗಿದೆ.ಈ ಹಿಂದೆ ವಜ್ರ ಮಹೇಶ ಅವರಿಂದ 5ಲಕ್ಷ 25 ಸಾವಿರ ಕ್ಕೆ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಧ್ವಜ ಖರೀದಿಯಾಗಿತ್ತು.
ಇನ್ನು ಗಣಪತಿಯ ಮುಂಭಾಗ ಪೂಜೆಯಾದ ಕೈಯ್ಯಿಂದ ಬರೆದ ಚಿತ್ರವನ್ನೂ ಕೂಡ ಹರಾಜು ಹಾಕಲಾಗಿದ್ದು, ಕಲಾವಿದ ಮನು.ಆರ್.ಎಲ್ ಕೈಯ್ಯಿಂದ ಬರೆದ ಚಿತ್ರವನ್ನೂ ಹರಾಜು ಹಾಕಲಾಗಿದೆ.
ಇನ್ನುಳಿದಂತೆ ಗಣಪತಿ ಕೊರಳಲ್ಲಿದ್ದ ಹಾರವನ್ನು ಚಿತ್ರಹಳ್ಳಿ ಲವಕುಮಾರ ಎಂಬುವವರು 1 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿದ್ದಾ ರೆ.ಮಧುಗಿರಿ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹರಾಜಲ್ಲಿ 6 ಲಕ್ಷ ರೂಪಾಯಿಗೆ ಈ ಭಗವಾಧ್ವಜವನ್ನು ಖರೀದಿಸಿದ್ದಾರೆ.
ಆಂಧ್ರಪ್ರದೇಶ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಹರಾಜು ಹಾಕುವಂತೆ, ಅದೇ ಮಾದರಿಯಲ್ಲಿ ಈ ಹರಾಜು ನಡೆಸಲಾಗಿದೆ.ಈ ಹಿಂದೆ ವಜ್ರ ಮಹೇಶ ಅವರಿಂದ 5ಲಕ್ಷ 25 ಸಾವಿರ ಕ್ಕೆ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಧ್ವಜ ಖರೀದಿಯಾಗಿತ್ತು.
ಇನ್ನು ಗಣಪತಿಯ ಮುಂಭಾಗ ಪೂಜೆಯಾದ ಕೈಯ್ಯಿಂದ ಬರೆದ ಚಿತ್ರವನ್ನೂ ಕೂಡ ಹರಾಜು ಹಾಕಲಾಗಿದ್ದು, ಕಲಾವಿದ ಮನು.ಆರ್.ಎಲ್ ಕೈಯ್ಯಿಂದ ಬರೆದ ಚಿತ್ರವನ್ನೂ ಹರಾಜು ಹಾಕಲಾಗಿದೆ.ಈ ಚಿತ್ರವನ್ನು ಮಂಜಣ್ಣ ಎಂಬವವರು1ಲಕ್ಷ 5 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದಾರೆ.
ಇನ್ನುಳಿದಂತೆ ಗಣಪತಿ ಕೊರಳಲ್ಲಿದ್ದ ಹಾರವನ್ನು ಚಿತ್ರಹಳ್ಳಿ ಲವಕುಮಾರ ಎಂಬುವವರು 1 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿದ್ದಾರೆ.




