ಭಾಲ್ಕಿ : ತಾಲೂಕಿನ ಕಲವಾಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಭಜನಾ ಸಂಜೆ ಕಾರ್ಯಕ್ರಮ ಜರುಗಿತು.
ಶ್ರೀ ಬೀರಲಿಂಗೇಶ್ವರ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಕುಮಾರ ಮಾತನಾಡಿ ಶ್ರಾವಣ ಮಾಸದಲ್ಲಿ ಬೇರೆ ಬೇರೆ ದೇವಸ್ಥಾನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಭಜನೆ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡುತ್ತೇವೆ ಇದರಿಂದ ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ಲೋಕಕ್ಕೆ ಯುವಕರನ್ನು ಸೆಳೆಯುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಹನುಮಾನ ಭಜನೆ ಮಂಡಳಿ ವತಿಯಿಂದ ಜಾನಪದ, ತತ್ವಪದ ಭಕ್ತಿಗೀತೆಗಳನ್ನು ಭಜಿಸಿ ಶಿವ ಆರಾಧನೆ ಮಾಡಿದರು. ಭಜನೆಯಲ್ಲಿ ಕಲಾವಿದರಾದ ಭಾಲ್ಕೇಶ್ವರ ನೇಳಗೆ, ಸುರೇಶ ಎಸ್,ಭಜರಂಗ,ಕೆ, ಶರಣಪ್ಪ ಹುಲಿ, ನಾಗನಾಥ ಎನ್, ಕಾಶೀನಾಥ ಎನ್, ಮುಖ್ಯ ಅತಿಥಿಗಳು ಚಂದ್ರಕಾಂತ ನೇಳಗೆ,ಶಿವಾಜಿ ದಾಡಗೆ, ಪಂಡಿತ ಹಸಬಾ, ರಾಜಕುಮಾರ ನೇಳಗೆ,
ಸೇರಿದಂತೆ ಗ್ರಾಮದ ತಾಯಂದಿರು ಇದ್ದರು.
ವರದಿ: ಸಂತೋಷ ಬಿಜಿ ಪಾಟೀಲ




