ಬೆಂಗಳೂರು: ಈಗಿನ ಪರಿಸ್ಥಿತಿಯಲ್ಲಿ ಪ್ರಾಚೀನ ಕಾಲದ ಸಂಸ್ಕೃತಿಯ ಜೊತೆಗೆ ಧಾರ್ಮಿಕ ಸಂಸ್ಕಾರ ಆಚಾರ ವಿಚಾರಗಳು ಮತ್ತು ಭಜನೆ, ಕೀರ್ತನೆ, ಗೀಗಿಪದ ಮತ್ತು ಮೊಹರಂ ಹಾಡುಗಳು ಮರೆಮಾಚಿ ಹೋಗುತ್ತಿವೆ ಎಂಬ ಅನುಮಾನದಲ್ಲಿ ನಾವು ಇದ್ದೇವೆ ಎಂದು ತೆಂಗಳಿ ಗ್ರಾಮದ ಕಾಂಗ್ರೆಸ್ ಹಿರಿಯ ರಾಜಕಾರಣಿ ವೀರಭದ್ರಯ್ಯ ಸಾಲಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ಬೆಣ್ಣೆ ತೊರೆ ನದಿಯ ದಂಡೆ ಮೇಲ ಇರುವ ಪ್ರಸಿದ್ಧ ದೇವತೆ ಅಂಬಾಭವಾನಿಯ ಪರಮ ಭಕ್ತ ಮತ್ತು ಕಾಂಗ್ರೆಸ್ ಹಿರಿಯ ರಾಜಕಾರಣಿ ಜಿಲ್ಲಾ ಪಂಚಾಯತ್ ಸದಸ್ಯ ಪಿ ಎಲ್.ಡಿ ಅಧ್ಯಕ್ಷ ದಿವಂಗತ ಶಿವ ಶರಣಪ್ಪ ಅಂಡಗಿ ಹಿಂದಿನ ಕಾಲದಿಂದಲೂ ಅಂಬಾಭವಾನಿ ದೇವಸ್ಥಾನದಲ್ಲಿ ಸೀಗಿ ಹುಣ್ಣಿಮೆ ದಿನದಂದು ಅಂಡಗಿ ಮನೆತನ ಅಂಡಗಿ ಪ್ರತಿಷ್ಠಾನ ವತಿಯಿಂದ ಅಂಬಾಭವಾನಿಗೆ ಉಡಿ ತುಂಬುವುದು,೪೮ನೇ ವಾರ್ಷಿಕೋತ್ಸವ ಅಂಗವಾಗಿ ನವರಾತ್ರಿ ೯ದಿನಗಳ ನಿರಂತರ ಭಕ್ತಿಯಿಂದ ಭಜನೆ ಮಾಡಿದ ವಿವಿಧ ಭಜನಾ ಮಂಡಳಿ ಅಧ್ಯಕ್ಷರಿಗೆ “ಸೇವಾಶ್ರೀ ಪ್ರಶಸ್ತಿ” ವಿತರಣೆ ಕಾರ್ಯಕ್ರಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದಿನ ಕಾಲದಿಂದಲೂ ಮಾನವನ ಆಚರಣೆ ಪದ್ದತಿ, ಧಾರ್ಮಿಕ ಭಾವನೆ, ನಂಬಿಕೆ ಪ್ರಕೃತಿ ಆರಾಧನೆ ದಾರಿ ಮಾಡಿಕೊಟ್ಟ ಪ್ರೇರಣಾಶಕ್ತಿ ಅಂಬಾಭವಾನಿ ಆದರೆ ಈಗಿನ ಕಂಪ್ಯೂಟರ್ ಯುಗದಲ್ಲಿ ಪೀಳಿಗೆಗಳಿಗೆ ಧಾರ್ಮಿಕ ಆಚರಣೆಗಳು ತಿಳಿಸುವ ಕೆಲಸ ಅಂಡಗಿ ಪ್ರತಿಷ್ಠಾನ ಮಾಡುವುದು ವೀರಭದ್ರಯ್ಯ ಸಾಲಿ ಖುಷಿ ತಂದಿದೆ ಎಂದರು.
ಪೂಜ್ಯ ಶಾಂತ ಸೋಮನಾಥ ಮಹಾ ಸ್ವಾಮಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ನಾಡಿನಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಪರ ಸಂಘಟನೆಗಳಿಂದ ಹಾಗೆ ಧಾರ್ಮಿಕ ಸಾಂಸ್ಕೃತಿ ಹಬ್ಬ ಹರಿದಿನಗಳು ಮಹಾ ಪುರುಷರ ಜಯಂತಿಗಳು ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾದ ಸೇವಾ ಅಂಡಗಿ ಪ್ರತಿಷ್ಠಾನ ಸಂಘ ಸಂಸ್ಥೆಗಳಿಗೆ ಮಾದರಿ ಶಾಂತ ಸೋಮನಾಥ ಮಹಾ ಸ್ವಾಮಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಧನಂಜಯ ಕುಲಕರ್ಣಿ ವಹಿಸಿ ಧಾರ್ಮಿಕ ಸೇವೆ ಸಲ್ಲಿಸಿದ ಮಹಾನಿಯರಾದ ನಾಗಣ್ಣ ಗರ್, ಚಂದ್ರಶೇಖರ ಬಸ್ತೆ, ಶ್ರೀಶೈಲ ತಮ್ಮನಗೌಡ, ಅನೀತಾ ಆರ್. ಮಠಪತಿ, ಕಾಶಮ್ಮ ಎ. ಜೋಗದ್ , ಸಿದ್ದಲಿಂಗ ಜಂಬಗಿ, ಸುಲಗಮ್ಮ ಕುಡಗುಂಟಿ, ಈರಣ್ಣ ಕೇಶ್ವಾರ, ಮಹಾದೇವ ಸ್ವಾಮಿ ಮಠಪತಿ “ಸೇವಾಶ್ರೀ ” ಪ್ರಶಸ್ತಿ ಪ್ರದಾನ ಮಾಡಿ ಧನಂಜಯ ಕುಲಕರ್ಣಿ ಮಾತನಾಡಿದರು.
ರೇಖಾ ಅಂಡಗಿ ಪ್ರಾರ್ಥನೆ ಗೀತೆ ಹೇಳಿದರು. ವೀರಭದ್ರಪ್ಪ ಬಾಳದೇ ಸರ್ವರಿಗೂ ಸ್ವಾಗತಿಸಿದರು, ಚಂದ್ರಶೇಖರ್ ಎಲೇರಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ತೆಂಗಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ್ ತುಪ್ಪದ್, ಗೌರವಾಧ್ಯಕ್ಷ ಹಾಗೂ ನಿವೃತ್ತ ಪ್ರೋಪೇಷರ್ ಸಿದ್ರಾಮಪ್ಪ ಅಂಡಗಿ, ಮಡಿವಾಳಯ್ಯ ಸಾಲಿಮಠ, ಹಿರಿಯ ಕಲಾವಿದ ಮತ್ತು ಗಾಯಕ ಬೀರಣ್ಣ ಪೂಜಾರಿ, ವಿಶ್ವನಾಥ್ ಬಾಳದೆ, ವಿನೋದ್ ಕುಮಾರ್ ಜನೇವರಿ, ನಾಗರಾಜ್ ಹೂಗಾರ, ಮಲ್ಲು ಹೊಸಹಳ್ಳಿ, ಸಿದ್ದು ಪಾಟೀಲ್, ಶರಣು ನೀಲಹಳ್ಳಿ, ಬಸವರಾಜ ಕಡ್ಲಿ, ಚಂದ್ರಶೇಖರ್ ಕಡ್ಲಿ, ಅರುಣಕುಮಾರ್ ಕುದರಿಕಾರ್, ಮಲ್ಲಣ್ಣ ಭೇರನ್, ಚಂದ್ರಶೇಖರ್ ಮಂಗದ್, ನಾಗರಾಜ್ ಹಡಬಲಿ, ಶಿವು ಮಠಪತಿ ಸೇರಿದಂತೆ ಮುಂತಾದವರು ಇದ್ದರು ಎಂದು ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ತೆಂಗಳಿ ಬಿ ವಿ ನ್ಯೂಸ್-5 ಚಾನಲ್ ಗೆ ತಿಳಿಸಿದ್ದಾರೆ.
ವರದಿ : ಅಯ್ಯಣ್ಣ ಮಾಸ್ಟರ್




