ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಆಚರಣೆ ನಡೆಯುತ್ತಿದೆ.
ಬಾಲರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದೇ ವೇಳೆ ಸೂರ್ಯ ರಶ್ಮಿ ಬಾಲರಾಮನ ಹಣೆಗೆ ಸ್ಪರ್ಶಿಸುವ ಮೂಲಕ ಸೂರ್ಯ ತಿಲಕವಿಟ್ಟ ವಿಸ್ಮಯಕಾರಿ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ಅಯೋಧ್ಯೆ ರಾಮ ಮಂದಿರದಲ್ಲಿ ಬಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಮೊದಲ ಶ್ರೀ ರಾಮನವಮಿ ಆಚರಿಸಲಾಗುತ್ತಿದೆ. ರಾಮ ಜನ್ಮಭೂಮಿಯಲ್ಲಿ ರಾಮನವಮಿ ಆಚರಣೆಗಾಗಿ ಲಕ್ಷಾಂತರ ಭಕ್ತರು ನೆರೆದಿದ್ದಾರೆ.
ಈ ಶುಭ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸೂರ್ಯವಂಶದ ಬಾಲರಾಮನಿಗೆ ಸೂರ್ಯದೇವರು ತನ್ನ ಕಿರಣಗಳ ಮೂಲಕ ಸ್ಪರ್ಶಿಸಿ ಸೂರ್ಯ ತಿಲಕವಿಟ್ಟಿದ್ದಾರೆ. ಈ ಅದ್ಭುತ ದೃಶ್ಯವನ್ನು ಕಣ್ಣಾರೆ ಕಂಡ ದೇವಾಲಯದಲ್ಲಿ ನೆರೆದಿದ್ದ ಭಕ್ತರು ಪುನೀತರಾದರು.
ವಿಸ್ಮಯಕಾರಿ ದೃಶ್ಯ ಕೋಟ್ಯಂತರ ಭಾರತೀಯರನ್ನು ಬೆರಗುಗೊಳಿಸಿದೆ. ಸುಮಾರು 5 ನಿಮಿಷಗಳಕಾಲ ಬಾಲರಾಮನ ಮೂರ್ತಿಯ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸಿವೆ. ಈ ವೇಳೆ ವೇದಘೋಷ, ಮಹಾಮಂಗಳರಾತಿ ಮೂಲಕ ಬಾಲರಾಮನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.