ಪಾವಗಡ : ತಾಲೂಕಿನ ಕಸಬಾ ಹೋಬಳಿಯ ಕಡಮಲಕುಂಟೆ ಗ್ರಾಮದಲ್ಲಿ ಭಕ್ತಿ ಶ್ರದ್ಧೆಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಮೊದಲಿಗೆ ಗ್ರಾಮದ ಪ್ರಮುಖ ದೇವರುಗಳಾದ ಶ್ರೀ ಆಂಜನೇಯಸ್ವಾಮಿ, ದುರ್ಗಾಮಾತೆ ಮತ್ತು ಮಾರಮ್ಮ ದೇವರುಗಳಿಗೆ ಎಲೆಪೂಜೆ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು

ನಂತರ ಭಕ್ತ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರು ಕುಂಭ ಕಳಸಗಳೊಂದಿಗೆ ಪೂಜೆ ಸಲ್ಲಿಸಿದರು, ಗ್ರಾಮದ ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಯಿತು, ರಾತ್ರಿ ಆರು ಗಂಟೆಯಿಂದ ಕನಕದಾಸರ ಭಾವಚಿತ್ರದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು
ಈ ಮೆರವಣಿಗೆಯಲ್ಲಿ “ಕುರುಬರೋ ನಾವು ಕುರುಬರು” ಎಂಬ ಹಾಡಿಗೆ ಮತ್ತು ಇತರೆ ಹಾಡುಗಳಿಗೆ ಮಹಿಳೆಯರು ಯುವಕರು ಕುಣಿದು ಕುಪ್ಪಳಿಸಿದರು ಗ್ರಾಮದ ಎಲ್ಲಾ ಸಮುದಾಯದವರು ಬಂದು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಮುದಾಯದವರೊಂದಿಗೆ ಜಯಂತಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ವರದಿ: ಶಿವಾನಂದ ಪಾವಗಡ




