Ad imageAd image

ಭಾಲ್ಕಿ ಪುರಸಭೆ ,ಮುಖ್ಯಾಧಿಕಾರಿ ಕಾರಬಾರಿಯನ್ನು ಅಮಾನತ್ತು ಮಾಡಿ: ಸಂಗಮೇಶ ಭೂರೆ

Bharath Vaibhav
ಭಾಲ್ಕಿ ಪುರಸಭೆ ,ಮುಖ್ಯಾಧಿಕಾರಿ ಕಾರಬಾರಿಯನ್ನು ಅಮಾನತ್ತು ಮಾಡಿ: ಸಂಗಮೇಶ ಭೂರೆ
WhatsApp Group Join Now
Telegram Group Join Now

ಬೀದರ್ : ಭಾಲ್ಕಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಯುವ ಕ್ರಾಂತಿ ಸಂಘಟನೆ ಜಿಲ್ಲಾಧ್ಯಕ್ಷ ಸಂಗಮೇಶ ಭೂರೆ ಒತ್ತಾಯಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಭಾಲ್ಕಿ, ಪುರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರಿಂದ ಒಂದು ಖಾತೆಗೆ ೪೦, ರಿಂದ ೫೦ ಸಾವಿರ ಹಣ ಪಡೆದು ಎನ್.ಎ ಲೆಔಟ್ ಇಲ್ಲದೆ ಅನಧಿಕೃತ ಖಾತೆಗಳನ್ನು ನೀಡುತ್ತಿದ್ದಾರೆ.

ಈ ಅಧಿಕಾರಿ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದಾರೆ. ಕಸ ವಿಲೆವಾರಿ ಮಾಡುವ ಟೆಂಡರ ಒಂದು ಕೋಟಿ ಅರವತ್ತೈದು ಲಕ್ಷ ರೂಪಯಿದು ಟೆಂಡರನಲ್ಲಿ ಟೆಂಡರ ಮಾಡದೆ ತಮಗೆ ಬೇಕಾದವರನ್ನು ಕೊಟ್ಟು ದೊಡ್ಡ ಮಟ್ಟದಲ್ಲಿ ಹೇರಾಪೇರಿ ಭ್ರಷ್ಟಾಚಾರ ಮಾಡಿದ್ದಾರೆ.

ಹಾಗೆ ಕಸವಿಲೆವಾರಿಗಾಗಿ ಬಕೀಟಗಳ ಖರೀದಿಯಲ್ಲಿ ಸಹ ಸಾಕಷ್ಟು ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ. ಒಂದು ಬಕೆಟನ ದರ ೭೦,ರಿಂದ ೮೦ ರೂಪಾಯಿ ಆದರೆ ಇವರು ಇವರು ಒಂದು ಬಕೇಟಗೆ ೫೦೦ ರಿಂದ ೧೦೦೦ ರೂಪಾಯಿ ವರೆಗೆ ಬಕೆಟ್ ನ ದರ ಬಿಲ ಮಾಡಿ ಹಣ ಎತ್ತಿದ್ದಾರೆ.

ಆ ಮೇಲೆ ಸಾಕಷ್ಟು ಖಾತೆಗಳನ್ನು ಮಾಡುವ ಸಂದರ್ಭದಲ್ಲಿ ೫ ಲಕ್ಷದ ವರೆಗೆ ಹಣದ ಬೇಡಿಕೆ ಇಡುತ್ತಿದ್ದಾರೆ. ಎಂದು ಈಗಾಗಲೇ ಸ್ವತಹ ಪುರಸಭೆಯ ಸದಸ್ಯರುಗಳೆ ಆರೋಪ ಮಾಡುತ್ತಿದ್ದಾರೆ. ೨, ೩ ವರ್ಷಗಳಿಂದ ಸಾಮನ್ಯ ಸಭೆಯನ್ನು ಸಹ ನಡಸಿರುವುದಿಲ್ಲ. ಹಾಗೆ ೧೪, ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಸಹ ಯಾವುದೇ ಕೇಲಸ ಮಾಡದೆ ಬೋಗಸ ಬಿಲ್ಲುಗಳನ್ನು ಎತ್ತಿದ್ದಾರೆ.

ಹಾಗೆ ಭಾಲ್ಕಿ ನಗರೋತ್ಮಾನ ಯೋಜನೆಯಡಿಯಲ್ಲಿ ೧ ಕೋಟಿ ಐವತ್ತು, ಲಕ್ಷ ಬೀದಿ ದೀಪಗಳ ಸಲುವಾಗಿ ಟೆಂಡರ್ ಆಗಿದೆ. ಮತ್ತು ಮೂರು ವರ್ಷಗಳ ಕಾಲ ಇದರ ಭಾಲ್ಕಿ ನಗರದಲ್ಲಿ ಬೀದಿ ದೀಪಗಳು ಹಾಳಾದರೆ, ಅದರ ನಿರ್ವಹಣೆ ಟೆಂqರ್ ಇಲ್ಲದೇ ಆಗಿರುತ್ತದೆ. ಅದಕ್ಕೆ ಅವರೆ ಜವಾಬ್ದಾರರು ಆದರೆ ಈ ಅಧಿಕಾರಿಯು ಬೀದಿ ದೀಪಗಳ ಬೊಗಸ್ ಬಿಲ್ ಸೃಷ್ಟಿ ಮಾಡಿ ಹಣ ಲಪಾಟಾಯಿಸಿದ್ದಾರೆ.

ಹೀಗೆ ಭಾಲ್ಕಿ ಪುರಸಭೆಯ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಅವರು ತಮ್ಮ ಮನಬಂದAತೆ ವರ್ತಸಿ ಭಾಲ್ಕಿ ಪುರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಭ್ರಷ್ಷಾಚಾರದ ಬಗ್ಗೆ ಕೇಳಲು ಹೋದರೆ ನಮ್ಮ ಮನೆಗಳನ್ನು ನೆಲಸಮ ಮಾಡುವುದಾಗಿ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಈ ಮುಖ್ಯಾಧಿಕಾರಿ ಮೇಲೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಕಾರಬಾರಿ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕೈ ಇದೆ. ಹಾಗಾಗಿ ಅವರು ಇಷ್ಟು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಈಗ ನಾವು ಪೌರಾಡಳಿತ ಸಚಿವ ರಹಿಮ್ ಖಾನ್ ಅವರಿಗೆ ದೂರು ಸಲ್ಲಿಸುವವರಿದ್ದೇವೆ. ಅವರು ಯಾವುದೇ ಮೂಲಾಜಿಲ್ಲದೇ ಕ್ರಮ ವಹಿಸುತ್ತಾರೆಂಬ ಭರವಸೆ ಇದೆ. ಅವರು ಸಹ ಇದೇ ರೀತಿ ಮಾಡಿದರೆ ದೀಪಾವಳಿ ನಂತರ ಉಗ್ರ ಹೋರಾಟ ನಡೆಸಲಾಗುವುದೆಂದು ಭೂರೆ ಎಚ್ಚರಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹಳ್ಳಿಖೇಡಕರ್, ಉಪಾಧ್ಯಕ್ಷ ಸಚಿನ್ ಮೋಳಕೆರೆ ಪತ್ರಿಕಾಗೋಷ್ಟಿಯಲ್ಲಿದ್ದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!