ನಿಪ್ಪಾಣಿ : ಶಮನೇವಾಡಿಯ ನವಗ್ರಹ ಮೈನಾರಿಟಿ ಸೊಸೈಟಿಗೆ 22 ಲಕ್ಷ 85 ಸಾವಿರ ರೂಪಾಯಿಗಳ ಲಾಭ. ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಭರತ್ ಕುಮಾರ್ ಖೋತ ಅವರಿಂದ ಮಾಹಿತಿ.
ಮಿತ ಖರ್ಚು ಪಾರದರ್ಶಕ ಆಡಳಿತ, ಸಕಾಲಕ್ಕೆ ಸಾಲ ಮರುಪಾವತಿ, ಗ್ರಾಹಕರ ಠೇವುದಾರರ ಆತ್ಮವಿಶ್ವಾಸ, ಹಾಗೂ ಸಿಬ್ಬಂದಿಯ ತತ್ಪರ ಸೇವೆಯ ಫಲದಿಂದ ಅಲ್ಪಾವಧಿಯಲ್ಲಿಯೇ ಚಿಕ್ಕೋಡಿ ತಾಲೂಕಿನ ಶಮನೇವಾಡಿಯ ನವಗ್ರಹ ಮೈನಾರಿಟಿ ಸೊಸೈಟಿಗೆ ಸನ್ 2024 25 ರ ಅವಧಿಗೆ 22 ಲಕ್ಷ 85 ಸಾವಿರ ರೂಪಾಯಿ ಲಾಭ ಬಂದಿದ್ದು ಸಂಸ್ಥೆಯ ವತಿಯಿಂದ ಸದಸ್ಯರಿಗೆ ಶೇಕಡಾ 10ರಷ್ಟು ಲಾಭಾಂಶ ನೀಡಲಾಗುವುದೆಂದು ಅಧ್ಯಕ್ಷ ಭರತ್ ಕುಮಾರ ಖೋತ
ತಿಳಿಸಿದರು. ಅವರು ಸಂಸ್ಥೆಯ 8ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ನಿರ್ದೇಶಕ ಪುಷ್ಪಕ ಜನಾಜ್ ಸ್ವಾಗತಿಸಿದರು. ಪ್ರಶಾಂತ ಶಿರಗುಪ್ಪೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಿಬ್ಬಂದಿ ಪೂಜಾ ಪಾಟೀಲ ಪ್ರಸ್ತಾವನೆ ಮಾಡಿದರು.

ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಸಭೆಯಲ್ಲಿ ಭರತ್ ಕುಮಾರ್ ಖೋತ ಅವರಿಂದ ವರದಿ ವಾಚನ, ಹಾಗೂ ವ್ಯವಸ್ಥಾಪಕಿ ಸುಧಾ ಹಿಪ್ಪರಗಿ ಅವರಿಂದ ಲಾಭ ಹಾನಿ ಅಂದಾಜು ಪತ್ರಿಕೆ ವಾಚನ ಮಾಡಿದರು. ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷ ಸುನಿಲ್ ಹೇರಿಗೆ ಸಂಚಾಲಕರಾದ ವೃಷಭ ಖೋತ, ಪೋಪಟ ಉದಗಾವೆ, ಶೀತಲ್ ಶಿರಗುಪ್ಪೆ ಅಭಿಜಿತ ಖೋತ, ರವೀಂದ್ರ ಮೋಳೆ,ಅಮಿತ್ ಚೌಗುಲೆ, ನೇಮಿನಾಥ ಮಗದುಮ, ಬಾಬಾ ಸಾಹೇಬ್ ಮಕಾಣದಾರ, ಪದ್ಮಾವತಿ ಖೋತ ಅಸ್ಮಿತಾ ಸಿರಗುಪ್ಪೆ, ಪ್ರಕಾಶ ಉಪಾಧ್ಯೆ ಸೇರಿದಂತೆ ಸಂಸ್ಥೆಯ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರ್ಧಮಾನ ಶಿರಗನ್ನವರ್ ನಿರೂಪಿಸಿ ಭಾವು ಸಾಹೇಬ್ ಖೋತ ವಂದಿಸಿದರು.
ವರದಿ : ಮಹಾವೀರ ಚಿಂಚಣೆ




